ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ ಅಧಿಕಾರಕ್ಕೆ

Lingaraj Badiger
Updated On : 13 Apr 2013, 11:29 am

ನರಗುಂದ: ಬಿಜೆಪಿ ಸರ್ಕಾರ ಐದು ವರ್ಷಗಳಲ್ಲಿ ದಾಖಲೆಯ ಭ್ರಷ್ಟಾಚಾರ ಮಾಡಿದೆ. ಈ ಬಾರಿ ಜನತೆ ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಚಾಲನೆ ಸಿಕ್ಕಿದ್ದು ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಎಂದರೆ ತಪ್ಪಾಗಲಾರದು. ಇದರಿಂದ ಜನತೆ ರೋಸಿ ಹೋಗಿದ್ದಾರೆ. ಈ ಕ್ಷೇತ್ರದ ಜನತೆ ಬಿ.ಆರ್. ಯಾವಗಲ್ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು. ಚಿಕ್ಕನರಗುಂದ ಗ್ರಾಮದ ಬಿಜೆಪಿ ಹಾಗೂ ಬಿಎಸ್ಸಾರ್ ಮುಖಂಡರಾದ ಬಿ.ಸಿ. ಬ್ಯಾಳಿ, ರವಿ ಯರಗಟ್ಟಿ, ಶಿವನಗೌಡ ಸಾಲೂಟಿಗಿ, ಶಿರೋಳ ಬಿಜೆಪಿಯಿಂದ ಬಿ.ವಿ. ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ರಂಗನಗೌಡ ತಿರಕನಗೌಡ್ರ, ಜಗಾಪುರ ಬಿಜೆಪಿಯಿಂದ ಸುಭಾಸ ದೇವಕ್ಕೆ ಮತ್ತು ಬೆಂಬಲಿಗರು, ಹುಣಸಿಕಟ್ಟಿ ಬಿಜೆಪಿಯಿಂದ ಮುತ್ತಪ್ಪ ಮುಳ್ಳೂರ, ಚಂದ್ರು ಹಡಪದ, ಮಡಿವಾಳಪ್ಪ ಬೆಣ್ಣೆ, ಭೈರನಹಟ್ಟಿ ಬಿಜೆಪಿಯಿಂದ ಸಿ.ಎನ್. ಮೊರಬದ, ಎಂ.ವಿ. ಐನಾಪುರ, ಕೊಣ್ಣೂರ ಬಿಜೆಪಿಯಿಂದ ಕೆ.ಬಿ. ಕೆಂಚನಗೌಡ್ರ, ಕುಡ್ಡೇಪ್ಪ ಕೊದನಪುರ, ನರಗುಂದ ಪಟ್ಟಣದಿಂದ ಎಂ.ಎಂ. ಮುಳ್ಳೂರ, ಮಹೇಶ ಬೋಳಶಟ್ಟಿ, ದಾವಲಸಾಬ ಮುಳಗುಂದ, ವಿ.ವಿ. ಕ್ವಾಟಿ, ಮಾಬುಸಾಬ ಬಿಚಗತ್ತಿ, ಯಲ್ಲಪ್ಪ ಹಟ್ಟಿ, ಮಲ್ಲಪ್ಪ ಚೊಳಚಗುಡ್ಡ, ವಿಠ್ಠಲ್ ಮುಧೋಳೆ, ಮುದ್ಗಣಿಕಿ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಗುರುಶಾಂತಪ್ಪ ದೊಡಮನಿ, ಹನಮಂತಗೌಡ ದಣೇದಗುಡ್ಡ, ಹಿರೇಕೊಪ್ಪ ಬಿಜೆಪಿಯಿಂದ ಶಿವಾನಂದ ಅಂಗಡಿ, ಬಸನಗೌಡ ದಾಡಿಬಾವಿ ಕಾಂಗ್ರೆಸ್ ಸೇರಿದರು. ಮಾಜಿ ಸಚಿವ ಬಿ.ಆರ್. ಯಾವಗಲ್, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂಬಣ್ಣ ವಾಳದ, ಎಸ್.ಡಿ. ಕೊಳ್ಳಿ, ಎಸ್.ಆರ್. ಪಾಟೀಲ, ದ್ಯಾಮಣ್ಣ ಸವದತ್ತಿ, ರಾಜು ಕಲಾಲ, ಸಿ.ಬಿ. ಪಾಟೀಲ, ಅಂದಾನಯ್ಯ ಹಿರೇಮಠ, ವಿಠಲ ಸಿಂಧೆ, ರಾಚಪ್ಪ ಅಳಗವಾಡಿ, ಗುರುಪಾದಪ್ಪ ಗುರಹಟ್ಟಿ, ದ್ಯಾಮಣ್ಣ ಕಾಡಪ್ಪನವರ, ನಿಂಗಪ್ಪ ಮೊರಬದ, ಎಸ್.ಬಿ. ದಂಡಿನ, ಎಫ್.ವೈ. ದೊಡಮನಿ, ದೀಪಕ ಗೋಡ್ಸೆ, ಎಸ್.ಕೆ. ದಂಡಾಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement