ಕೆಜೆಪಿಯಿಂದ ಬಲಿಷ್ಠ ಕರ್ನಾಟಕ ನಿರ್ಮಾಣ
ಗದಗ: ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತಾಸಕ್ತಿ ರಕ್ಷಣೆ ಅಸಾಧ್ಯವೆಂಬುದು ಇತಿಹಾಸದ ಅನೇಕ ಘಟನೆಗಳಿಂದ ರುಜುವಾತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಮಾತ್ರ ಬಲಿಷ್ಠ, ಅಭಿವೃದ್ಧಿಪರ ಕರ್ನಾಟಕ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಕೆಜೆಪಿ ಅಧ್ಯಕ್ಷ ರಾಜು ಕುರಡಗಿ ಹೇಳಿದರು.
ಈಚೆಗೆ ಅವರು ಗದಗ ವಿಧಾನಸಭೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಬೆಂಬಲಿಗರು ಸೇರಿ ಚಿಂಚಲಿ, ಮುಳಗುಂದ, ಹೊಸಳ್ಳಿ ವಿವಿಧೆಡೆ ನಡೆಸಿದ ಮತಯಾಚನೆಯ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರೈತರು, ನೇಕಾರರು, ಮುಸ್ಲಿಂ ಬಾಂಧವರಿಗೆ ಅತಿ ಹೆಚ್ಚು ಯೋಜನೆಗಳು, ಅನುದಾನವನ್ನು ನೀಡಿದ ಖ್ಯಾತಿ ಯಡಿಯೂರಪ್ಪ ಅವರಿಗಿದ್ದು, ಜನಪರ ಆಡಳಿತ ಮುಂದುವರಿಯಲು ಎಸ್.ಬಿ. ಸಂಕಣ್ಣವರಿಗೆ ಗದಗ ಮತಕ್ಷೇತ್ರದ ಜನತೆ ಈ ಸಲ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ಪಕ್ಷದ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಮಾತನಾಡಿ, ಕೆಜೆಪಿ ಅಭ್ಯರ್ಥಿಯಾಗಿರುವ ತಮಗೆ ಈ ಸಲದ ಎಲ್ಲ ಜನತೆ ಆಶೀರ್ವಾದ ನೀಡಬೇಕು. ತನ್ಮೂಲಕ ಗದಗ ಶಹರ, ಗ್ರಾಮಾಂತರ ಭಾಗದ ಸರ್ವಾಂಗೀಣ ಪ್ರಗತಿಗೆ ಚಾಲನೆ ನೀಡಬೇಕು. ಯಡಿಯೂರಪ್ಪ ನೇತೃತ್ವದ ಅಭಿವೃದ್ಧಿ ಕೆಲಸ ಕಾರ್ಯಗಳು ರಾಜ್ಯದಲ್ಲಿ ಇನ್ನಷ್ಟು ಸಶಕ್ತವಾಗಿ ಮುಂದುವರಿಯಲು ಕಾರಣಿಕರ್ತರಾಗಬೇಕು ಎಂದರು. ಕೆಜೆಪಿ ಮುಖಂಡ ಸದು ಮದರಿಮಠ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಪಕ್ಷದ ಕಾರ್ಯದರ್ಶಿ ಸಿದ್ದು ಪಲ್ಲೇದ, ಅಮರೇಶ ಅಂಗಡಿ, ಕೆ.ಪಿ. ಗುಳಗೌಡ್ರ, ಸಂಗಣ್ಣ ಬಂಗಾರಶೆಟ್ರ, ರಜಾಕ ಡಂಕೇದ, ಚಂದ್ರು ತಡಸದ, ಪ್ರಭುದೇವ ಹಿರೇಮಠ. ಸೈಯದಖಾಲೀದ ಕೊಪ್ಪಳ ಮಾತನಾಡಿದರು. ಅಮರೇಶ ಬೆಟಗೇರಿ, ವಿಕ್ರಾಂತ ಅಬ್ಬಿಗೇರಿ, ದಾನು ದಾನಪ್ಪಗೌಡ್ರ, ಉಡಚಪ್ಪ ಹಳ್ಳಿಕೇರಿ, ರಾಜಣ್ಣ ವಾಲಿ, ಹನುಮಂತಪ್ಪ ಅಳವಂಡಿ, ಇರ್ಷಾದ್ ಮಾನ್ವಿ, ಚಂದ್ರು ಹಾದಿಮನಿ, ಆನಂದ ಸರ್ವದೆ, ಪೂಜಾ ಬೇವೂರ, ಪದ್ಮಾ ಗುಜ್ಜಲ್, ಶಂಕ್ರವ್ವ ಬಳ್ಳೊಳ್ಳಿ ಇದ್ದರು.