ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶ್ರೀರಾಮನಿಗಿಂತ ಶ್ರೇಷ್ಠರು ಮತ್ತೊಬ್ಬರಿಲ್ಲ: ಹೆಗಡೆ

Lingaraj Badiger
Updated On : 13 Apr 2013, 11:39 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 12
ರಾಮ ನಾಮ ಮಹಾಮಂತ್ರದ ಸ್ಮರಣೆಯಲ್ಲಿ ಅಗಾಧ ಶಕ್ತಿಯಿದೆ. ಹಿಂದೂ ಸಂಸ್ಕೃತಿಯಲ್ಲಿ ರಾಮನಿಗಿಂತ ಶ್ರೇಷ್ಠ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತೀಯ ಸಂಘದ ಕಾರ್ಯದರ್ಶಿ ಮಹಾಬಲೇಶ್ವರ ಹೆಗಡೆ ಹೇಳಿದರು.
ಅವರು ಬುಧವಾರ ಸಂಜೆ ಶಂಕರಭಾರತಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ. ನಮ್ಮ ಮೇಲೆ ಪ್ರತಿ ನಿತ್ಯ ಪರಕೀಯರ ದಾಳಿ ನಡೆಯುತ್ತಿದ್ದು, ಹಿಂದೂ ಧರ್ಮದ ಜಾಗೃತಿಗಾಗಿ ಚಿಂತಿಸಬೇಕಾದ ಸಮಯ ಇದಾಗಿದೆ. ಅದಕ್ಕಾಗಿ ನಮ್ಮಲ್ಲಿ ಹಿಂದೂ ಧರ್ಮದ ಆಧ್ಯಾತ್ಮ ಶಕ್ತಿ ಜಾಗೃತವಾಗುವುದು ಅವಶ್ಯವಾಗಿದೆ ಎಂದರು. ನ್ಯಾಯವಾದಿ ವಿ.ಎಲ್. ಪೂಜಾರ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಇರುವ ನೆಮ್ಮದಿ ಬೇರೆ ಯಾವ ಧರ್ಮದಲ್ಲಿ ಇಲ್ಲವಾಗಿದೆ, ರಾಮನಾಮ ಸ್ಮರಣೆಯಿಂದ ಮಾನಸಿಕ ನೆಮ್ಮದಿ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಬುರಾವ ಕುಲಕರ್ಣಿ, ಸಾನ್ನಿಧ್ಯವಹಿಸಿದ್ದ ಕರೆವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ರಾಮನ ಆದರ್ಶವನ್ನು ಎಲ್ಲರೂ ಪಾಲಿಸಿ ರಾಮನಾಮ ಜಪದಿಂದ ಎಲ್ಲ ಪಾಪ ಕರ್ಮಗಳು ದೂರಾಗುವವು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಚಂದ್ರಣ್ಣ ಮಹಾಜನಶೆಟ್ಟರ್ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಧರ್ ಕುಲಕರ್ಣಿ, ಮಧುಕೇಶ ಯರ್ಲಗಟ್ಟಿ, ಸಂಚಾಲಕ ನೀಲಪ್ಪ ಹತ್ತಿ, ಗಿರೀಶ ಸಜ್ಜನರ, ರಾಘವೇಂದ್ರ ಪೂಜಾರ, ಚಂದ್ರು ಹಂಪಣ್ಣವರ ಉಪಸ್ಥಿತರಿದ್ದರು.
ಪ್ರೇಮ ಶೇಟ್ ಸ್ವಾಗತಿಸಿದರು. ಬಸವರಾಜ ಅರಳಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement