ಇಂದು 1015ನೇ ಶರಣ ಸಂಗಮ
ಗದಗ: ಸ್ಥಳೀಯ ಶಿವಾನಂದ ನಗರದ ಬಸವ ಮಂಟಪದಲ್ಲಿ ಏ. 14ರ ಬೆಳಗ್ಗೆ 11.30 ಗಂಟೆಗೆ ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಬಸವದಳದ 1015ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಸ್ವರ ವಚನ-ಬಸವ ಗೀತಾಂಜಲಿ ಪುಸ್ತಕ ಬಿಡುಗಡೆ ನಡೆಯಲಿದೆ. ಅಧ್ಯಕ್ಷತೆಯನ್ನು ಎಂ.ಬಿ. ಲಿಂಗಧಾಳ ವಹಿಸುವರು. ಪುಸ್ತಕದ ಕುರಿತಾಗಿ ಬಸವರಾಜ ದಂಡಿನ ಮಾತನಾಡುವರು. ಅತಿಥಿಗಳಾಗಿ ಎಸ್.ಎ. ಮುಗದ ಹಾಗೂ ಗಿರಿಜಕ್ಕ ಧರ್ಮರಡ್ಡಿ ಆಗಮಿಸುವರು. ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಪ್ರಕಾಶ ಅಸುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.