ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ ಬೆಂಬಲಿಸಿ: ಜಿ.ಎಸ್. ಪಾಟೀಲ

Vishwanath S
Updated On : 14 Apr 2013, 12:08 pm

ಕನ್ನಡಪ್ರಭ ವಾರ್ತೆ, ನರೇಗಲ್ಲ, ಏ. 12
ರೋಣ ಮತಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಮತಕ್ಷೇತ್ರದ ಜನತೆಯ ಕನಸು ನನಸು ಮಾಡುವುದಕ್ಕಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸುವಂತೆ ಮಾಜಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಈಚೆಗೆ ಅವರು ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅಭಿವೃದ್ಧಿ ಕಡೆಗೆ ಯೋಚಿಸದೆ ಅಧಿಕಾರಕ್ಕಾಗಿ ಇವರ ಕಚ್ಚಾಟ ಕಂಡು ಜನತೆ ಬೇಸತ್ತಿದ್ದಾರೆ. ನಾನು ಈ ಹಿಂದೆ ಶಾಸಕನಾಗಿದ್ದಾಗ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಈಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಮತದಾರರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದರು.
ವೀರಭದ್ರಪ್ಪ ಹೊಸಮನಿ, ಅಂದಪ್ಪ ವಿರಾಪುರ, ಶಂಕರಗೌಡ ಪೊಲೀಸಪಾಟೀಲ, ಶರಣಪ್ಪ ಕಿಟಗೇರಿ, ಸಂಗಪ್ಪ ಪಟ್ಟಣಶೆಟ್ಟಿ, ರುದ್ರಪ್ಪ ನಿರಲೋಟಿ, ಉಮೇಶ ಬಾಸಲಾಪುರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಜಿಪಂ ಸದಸ್ಯ ಡಾ. ಬಸವರಡ್ಡೇರ, ತಾಪಂ ಸದಸ್ಯ ಬಸವರಾಜ ಮಲ್ಲಾಪುರ, ಪರಶುರಾಮಪ್ಪ ಅಳಗವಾಡಿ, ಪ್ರಭು ಮೇಟಿ, ಶಶಿಧರ ಹಟ್ಟಿ, ಮೋಹನಸಾ ರಾಯಬಾಗಿ, ಚಂಬಣ್ಣ ಚವಡಿ ಮುಂತಾದವರು ಉಪಸ್ಥಿತರಿದ್ದರು. ಅಜಪ್ಪ ಮಳಗಿ ಸ್ವಾಗತಿಸಿದರು. ಸುರೇಶ ಹೊಸಮನಿ ನಿರೂಪಿಸಿದರು. ಶಿವಕುಮಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement