ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಬೇಸತ್ತಿದ್ದೇನೆ

Vishwanath S
Updated On : 14 Apr 2013, 12:07 pm

ಕನ್ನಡಪ್ರಭ ವಾರ್ತೆ, ರೋಣ, ಏ. 13
ಬಿಜೆಪಿ ಮತ್ತು ಜೆಡಿಎಸ್ ತತ್ವ ಮತ್ತು ಸಿದ್ಧಾಂತಗಳಿಲ್ಲದ ಪಕ್ಷವಾಗಿದ್ದು, ಸ್ವಜನ ಪಕ್ಷಪಾತ ಮತ್ತು ಜಾತಿವಾದಿಗಳಿಂದ ಕೂಡಿವೆ. ಜೆಡಿಎಸ್‌ನಲ್ಲಿ ಅನೇಕ ವರ್ಷಗಳಿಂದಿದ್ದ ನಾನು ಅಲ್ಲಿನ ಕುಟುಂಬ ರಾಜಕಾರಣಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ. ಕಾಂಗ್ರೆಸ್ ಗೆಲುವಿಗೆ ಅವಿರತವಾಗಿ ಶ್ರಮಿಸುತ್ತೇನೆ ಎಂದು ಯುವ ಮುಖಂಡ ರವಿ ದಂಡಿನ ಹೇಳಿದರು.
ಅವರು ಶುಕ್ರವಾರ ಸಂಜೆ ತಾಲೂಕಿನ ಇಟಗಿ ಗ್ರಾಮದಲ್ಲಿ ಜರುಗಿದ ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರಿಂದ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡು ಮಾತನಾಡಿದರು.
ಮಾಜಿ ಶಾಸಕ ಜಿ.ಎಸ್. ಪಾಟೀಲರು ಸಜ್ಜನ ರಾಜಕಾರಣಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರ ವಿರುದ್ಧ ಸ್ಪರ್ಧಿಸಿ ತಪ್ಪು ಮಾಡಿದೆ. ಅವರಲ್ಲಿನ ಜನಪರ, ಬಡವರ, ರೈತರ ಬಗೆಗಿನ ಕಾಳಜಿ ಮತ್ತು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಕ್ಕೆ ಮಾರು ಹೋಗಿದ್ದೇನೆ. ಆದ್ದರಿಂದ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುತ್ತಿದ್ದೇನೆ, ಪಾಟೀಲರ ಗೆಲುವು ನಿಶ್ಚಿತವಾಗಿದೆ ಎಂದರು.
ಮಾಜಿ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಮಾಜಿ ಸಂಸದ ಆರ್.ಎಸ್. ಪಾಟೀಲ, ಜಿ.ಪಂ.ನ ಮಾಜಿ ಅಧ್ಯಕ್ಷ ನಿಂಗಪ್ಪ ಬೇವಿನಮರದ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಬಿ.ಎಫ್. ದಂಡಿನ, ಶ್ರೀನಿವಾಸ ಶೇಠ, ವಿ.ಆರ್. ಗುಡಿಸಾಗರ, ವಿಶ್ವನಾಥ ಜಿಡ್ಡಿಬಾಗಿಲ,  ಐ.ಎಸ್. ಪಾಟೀಲ, ವೀರಣ್ಣ ಸೊನ್ನದ, ಹಾಲಪ್ಪ ಹರ್ತಿ, ಪರಶುರಾಮ ಅಳಗವಾಡಿ, ಮೋಹನ ರಾಯಬಾಗಿ, ಚಂಬಣ್ಣ ಚವಡಿ, ಸಂಗು ನವಲಗುಂದ, ಬಸವರಾಜ ನವಲಗುಂದ, ಶಿವು ಹುಲ್ಲೂರ, ಇಸ್ಮಾಯಿಲ್ ಹೊರಪೇಟಿ ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು. ಪ್ರಭು ಮೇಟಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement