ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳೆ ತನ್ನಲ್ಲಿನ ಸಾಮರ್ಥ್ಯ ತೋರಿಸಲಿ: ನೀಲಾಂಬಿಕಾ

Vishwanath S
Updated On : 14 Apr 2013, 12:05 pm

ನರಗುಂದ: ದೇಶದಲ್ಲಿ ಹಿಂದಿನ ಕಾಲದಲ್ಲಿ ಮಹಿಳೆ ನಾಲ್ಕು ಗೋಡೆಗಳ ಮಧ್ಯೆಯೇ ಜೀವಿಸುವಂತಹ ಸ್ಥಿತಿಯಿತ್ತು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮಹಿಳೆಗೆ ಎಲ್ಲ ಕ್ಷೇತ್ರದಲ್ಲಿ ಮೀಸಲಾತಿಯನ್ನು ಸರ್ಕಾರ ನೀಡಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದು ತಮ್ಮ ಸಾಮರ್ಥ್ಯ ತೋರಿಸಬೇಕು ಎಂದು ಸಿದ್ಧೇಶ್ವರ ಸರ್ಕಾರಿ ಕಾಲೇಜಿನ ಪ್ರಾಚಾರ್ಯೆ ಡಾ. ನೀಲಾಂಬಿಕಾ ಪಟ್ಟಣಶಟ್ಟಿ ಹೇಳಿದರು. ಈಚೆಗೆ ಅವರು ತಾಲೂಕಿನ ಭೈರನಹಟ್ಟಿ ಗುರು ಭ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಹಾಗೂ ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಕವಿವಿ ಧಾರವಾಡದಲ್ಲಿ ಸಂಶೋಧನೆ ಮಾಡಿ, ಪಿಎಚ್‌ಡಿ ಪಡೆದ ನಿಮಿತ್ತ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿ ಮೂಲಕ ಸ್ಥಾನ ಮಾನ ಕಲ್ಪಿಸಿದೆ. ಅದಕ್ಕೆ ಪ್ರತಿಯೊಬ್ಬ ಮಹಿಳೆ ತನ್ನಲ್ಲಿರುವ ಪ್ರತಿಭೆಯನ್ನು ಸಮಾಜದಲ್ಲಿ ತೋರ್ಪಡಿಸಲು ಮುಂದಾಗಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆರ್ಶೀವಚನ ನೀಡಿದರು. ಪ್ರೊ. ಜಿ. ಕಿಶೋರ, ಪಿ.ಎಸ್. ಅಣ್ಣಿಗೇರಿ, ರಾಮಣ್ಣ ಅಪೋಜಿ, ಬಸವರಾಜ, ಭೀಮಣ್ಣ ಅಕ್ಕೇರಿ, ರಮೇಶ ಐನಾಪುರ, ಮಹಾಂತೇಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement