ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಏ. 13
ಸಾರ್ವಜನಿಕರಿಗೆ ಆವಶ್ಯಕವಾದ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ, ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಮೂಲ ಗುರಿ ಎಂದು ರೋಣ ವಿಧಾನಸಭಾ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದಲ್ಲಿ ಶುಕ್ರವಾರ ಪ್ರಚಾರ ಕಾರ್ಯದ ಸಮಯದಲ್ಲಿ ಮಾತನಾಡಿದ ಅವರು, ರೋಣ ಮತಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮೂಲಸೌಲಭ್ಯಗಳಾದ ನೀರು, ಶೌಚಖಾನೆ, ವಿದ್ಯುತ್ ಸಮಸ್ಯೆಯಿದೆ. ಈ ಸಮಸ್ಯೆ ನಿವಾರಣೆಗೆ ಹೆಚ್ಚು ಗಮನಹರಿಸಿ, ಪರಿಹಾರ ಒದಗಿಸಿ ಕೊಡುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಕ್ಷೇತ್ರದ ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣಗಳಲ್ಲಿ ಅಪಾರ ಜನಬೆಂಬಲ ದೊರೆಯುತ್ತಿದೆ. ಅದರಲ್ಲೂ ಯುವಕರ ದಂಡು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ದುರಾಡಳಿತ, ಭ್ರಷ್ಟಾಚಾರ ಹಾಗೂ ಆಂತರಿಕ ಕಲಹಗಳಿಂದ ಬೇಸತ್ತು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರಾಮಣ್ಣ ಸಕ್ರೋಜಿ, ಅಣ್ಣಪ್ಪ ಜೋಳದ, ಪಪಂ ಮಾಜಿ ಸದಸ್ಯ ದಾವೂದಲಿ ಕುದರಿ, ರಾಜ್ಯ ಯುವ ಕಾರ್ಯದರ್ಶಿ ಕಳಕಪ್ಪ ಕೊಡತಗೇರಿ, ಉಮೇಶ ಮಲ್ಲಾಪುರ, ವಿನಾಯಕ ಕಟ್ಟಿಮನಿ, ಗಣಿಸಾಬ ಕುದರಿ ಉಪಸ್ಥಿತರಿದ್ದರು.