ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಣ ದುರ್ಬಳಕೆ ಆರೋಪ: ಗುಂಪು ಘರ್ಷಣೆ

Vishwanath S
Updated On : 14 Apr 2013, 12:04 pm

ಲಕ್ಷ್ಮೇಶ್ವರ: ಪಟ್ಟಣದ ಪ್ರಸಿದ್ಧ ಯಾತ್ರಾ ಸ್ಥಳವಾದ ದೂದಪೀರಾ ದರ್ಗಾಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರದಲ್ಲಿ ಸದ್ಯದ ದರ್ಗಾ ಕಮಿಟಿ ಹಣ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಶುಕ್ರವಾರ ತಡರಾತ್ರಿ ಘರ್ಷಣೆ ಸಂಭವಿಸಿದೆ. ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಜಗಳ ತಾರಕಕ್ಕೆ ತೆರಳಿ, ಪರಸ್ಪರ ಹೊಡೆದಾಡಿದ್ದಾರೆ. ದರ್ಗಾದಲ್ಲಿ ನಡೆಯುತ್ತಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ಒಂದು ಗುಂಪಿನ ಸದಸ್ಯರು ಪ್ರಶ್ನಿಸಿದಾಗ ಕುಪಿತಗೊಂಡ ಮತ್ತೊಂದು ಗುಂಪಿನ ಸದಸ್ಯರು ಹಲ್ಲೆ ಮಾಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಮತ್ತೊಂದು ಗುಂಪಿನವರೂ ದಾಳಿ ಆರಂಭಿಸಿದ್ದಾರೆ. ಈ ಹೊಡೆದಾಟಕ್ಕೆ ಸಂಬಂಧಿಸಿ ಒಟ್ಟು 17 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಲಕ್ಷ್ಮೇಶ್ವರ ಠಾಣಾಧಿಕಾರಿ  ಪಿ. ವೆಂಕಟಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement