ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೊರೆ 'ಹೊರ'ಲು ಹುರಿಯಾಳುಗಳಿಲ್ಲ!

Vishwanath S
Updated On : 14 Apr 2013, 12:07 pm

ಗದಗ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜಿಲ್ಲಾ ಜೆಡಿಎಸ್ ಮನೆ ಖಾಲಿಯಾಗುತ್ತಿದೆ. ಹಲವಾರು ವರ್ಷಗಳ ಕಾಲ ಪಕ್ಷದ ಉನ್ನತ ಸ್ಥಾನದಲ್ಲಿದ್ದವರು ಈಗ ಗುಳೆ ಹೋಗುತ್ತಿದ್ದಾರೆ. ಇದು ಜೆಡಿಎಸ್ ಮಟ್ಟಿಗೆ ಆಘಾತಕಾರಿ ಬೆಳವಣಿಗೆ.
ಒಂದು ತಿಂಗಳ ಅವಧಿಯಲ್ಲಿ 8ಕ್ಕೂ ಹೆಚ್ಚು ಪ್ರಮುಖರು ಜೆಡಿಎಸ್‌ನಿಂದ ಹೊರನಡೆದಿರುವುದು ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದಕ್ಕೆ ಸಾಕ್ಷಿ. ಈ ಎಲ್ಲ ಬೆಳವಣಿಗೆಗಳಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗುವುದು ಖಚಿತ.
ಮೂರು ವರ್ಷಗಳಿಗೂ ಹೆಚ್ಚು ಕಾಲ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ, 2008ರಲ್ಲಿ ರೋಣ ಕ್ಷೇತ್ರದಿಂದ ಸ್ಪರ್ಧಿಸಿ 10 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದ ರವಿ ದಂಡಿನ, ಅವರ ಬಳಿಕ ಎರಡು ವರ್ಷ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಶ್ರೀನಿವಾಸ ಸೇಠ್, ಯುವ ಸಂಘಟನೆಯ ಮೂಲಕವೇ ಸಾರ್ವಜನಿಕ ಬದುಕನ್ನು ರೂಪಿಸಿಕೊಂಡು, ಅತ್ಯಂತ ಕಡಿಮೆ ಅವಧಿಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ಎಚ್.ಎಸ್. ಸೋಂಪುರ, ಗದಗ ನಗರದಲ್ಲಿ ಯಂಗ್ ಇಂಡಿಯಾ ಸಂಘಟನೆ ಮೂಲಕ ಬೃಹತ್ ಉದ್ಯೋಗ ಮೇಳ ನಡೆಸಿದ್ದ ವೆಂಕನಗೌಡ ಗೋವಿಂದಗೌಡ್ರ ಇವರೆಲ್ಲ ಪಕ್ಷ ಬಿಟ್ಟು ಹೊರಬಂದಿದ್ದಾರೆ.

ಅನ್ಯ ಪಕ್ಷಗಳತ್ತ ನಾಯಕರು: 2010ರಲ್ಲಿ ಬಿಜೆಪಿ ಸರ್ಕಾರ ಹಳ್ಳಿಗುಡಿಯಲ್ಲಿ ಪೋಸ್ಕೊ ಕಂಪನಿ ಸ್ಥಾಪಿಸಲು ನಿರ್ಧರಿಸಿದಾಗ ಅಲ್ಲಿನ ರೈತರು ದೊಡ್ಡ ಪ್ರಮಾಣದಲ್ಲಿ ವಿರೋಧಿಸಿದ್ದರು. ಅವರ ಧ್ವನಿಯಾಗಿ ಎಚ್.ಡಿ. ಕುಮಾರಸ್ವಾಮಿ ನಿಂತಾಗ ವ್ಯಕ್ತವಾದ ಬೆಂಬಲ ಗಮನಿಸಿದರೆ ಈ ಬಾರಿ ಜೆಡಿಎಸ್ ಪ್ರಭಾವ ಜೋರಾಗಿದೆ ಎಂದು ಹೇಳಲಾಗಿತ್ತು. ವಿಧಾನಸಭೆ ಚುನಾವಣೆ ಘೋಷಣೆಯಾಗುವವರೆಗೂ ತುಂಬಿದ ಮನೆಯಂತಿದ್ದ ಪಕ್ಷ ಈಗ ಖಾಲಿಯಾಗುತ್ತಿದೆ.ಹೊರಟ್ಟಿ ಮೇಲೆ ನೇರ ಆರೋಪ
ಜಿಲ್ಲೆಯಲ್ಲಿ ಜೆಡಿಎಸ್ ತ್ಯಜಿಸಿದವರು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯತ್ತ ಬೆರಳು ತೋರಿಸುತ್ತಿದ್ದಾರೆ. ಹೊರಟ್ಟಿ ಗದಗ ಜಿಲ್ಲೆ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲಿ ಯಾರನ್ನೂ ಬೆಳೆಯಲು ಬಿಡುತ್ತಿಲ್ಲ. ಜಾತಿ ರಾಜಕಾರಣ ಮಾಡುತ್ತಾ, ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಹಾಗಾಗಿಯೇ ಪಕ್ಷ ಬೆಳೆಯುತ್ತಿಲ್ಲ. ಚುನಾವಣೆಯನ್ನು ಅವರು ಗಂಭೀರವಾಗಿ ಪರಿಗಣಿಸಿ, ಕಾರ್ಯಕರ್ತರ ಸಭೆಗಳನ್ನು ನಡೆಸುವುದಿಲ್ಲ. ತಮ್ಮ ಹಿಂಬಾಲಕರನ್ನು ಹೊರತು ಪಡಿಸಿ, ಯಾರನ್ನು ಮಾತನಾಡಿಸುವುದಿಲ್ಲ. ಈ ವಿಷಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದರೂ ಅವರು ಮತ್ತೆ ಮತ್ತೆ ಹೊರಟ್ಟಿ ಮಾತಿಗೆ ಮಣೆ ಹಾಕುತ್ತಿದ್ದಾರೆ. ಹಾಗಾಗಿ ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲೂ ಜೆಡಿಎಸ್‌ಗೆ ಸಾಧ್ಯವಾಗಿಲ್ಲ.
ನಾಯಕರು ಗಮನಿಸುತ್ತಿಲ್ಲ
ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ನಾಯಕರು ಗಮನ ನೀಡುತ್ತಿಲ್ಲ. ಹೊರಟ್ಟಿ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮುಂಡರಗಿ ಪಟ್ಟಣದಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಆದರೆ, ಹೊರಟ್ಟಿ ಅವರ ಅನುಕೂಲಸಿಂಧು ರಾಜಕಾರಣದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಅದಕ್ಕಾಗಿ ನಾವೆಲ್ಲ ಪಕ್ಷವನ್ನು ತ್ಯಜಿಸಿದ್ದೇವೆ.
 ರವಿ ದಂಡಿನ
ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ80ರ ದಶಕದಿಂದಲೂ ನಾವೆಲ್ಲ ಜನತಾ ಪರಿವಾರದಲ್ಲಿಯೇ ಬೆಳೆದು ಬಂದಿದ್ದೇವೆ. ಅಂದಿನ ಕಾಂಗ್ರೆಸ್ ಪ್ರಭಾವದಲ್ಲಿಯೇ ಗದಗ ನಗರಸಭೆಯಲ್ಲಿ ನಾಲ್ಕೈದು ಸ್ಥಾನಗಳನ್ನು ಗೆದ್ದು, ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದೇವೆ. ಆದರೆ, ಹೊರಟ್ಟಿ ಅವರ ನಿರ್ಲಕ್ಷ್ಯದಿಂದ ಈ ಬಾರಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ನಾನು ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದಾಗ ಸೌಜನ್ಯಕ್ಕೂ ನನಗೆ ತಿಳಿಸದೆ ಬೇರೊಬ್ಬರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಪಕ್ಷದ ಹಿರಿಯರ ವರ್ತನೆಗೆ ಬೇಸತ್ತು ಬೇರೆ ಪಕ್ಷ ಸೇರುತ್ತಿದ್ದೇವೆ.
   ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement