ಇಂದು ಜಾತ್ರೆ
ಗಜೇಂದ್ರಗಡ: ಸರ್ವ ಧರ್ಮಿಯರ ಭಾವೈಕ್ಯತೆ ಸಾರುವ ಸಮೀಪದ ಗೋಗೇರಿ ಗ್ರಾಮದ ಅನ್ನದಾನೇಶ್ವರ ಜಾತ್ರಾ ಮಹೋತ್ಸವವು ಏ. 15ರ ಸಂಜೆ 5 ಗಂಟೆಗೆ ನಡೆಯಲಿದೆ. ಸಾನ್ನಿಧ್ಯವನ್ನು ಹಾಲಕೆರೆಯ ಅಭಿನವ ಅನ್ನದಾನ ಶ್ರೀಗಳು ವಹಿಸುವರು. ಶ್ರೀಮಠದ ಚೇರಮನ್ ಹಾಜಿ ಮೌಲಾಸಾಬ ಬಾಗವಾನ ಸೇರಿದಂತೆ ವಿವಿಧ ಧರ್ಮಿಯ ಪೀಠಾಧಿಪತಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಜಾತ್ರಾ ಮಹೋತ್ಸವ ಪ್ರಯುಕ್ತ ಅನ್ನದಾನೇಶ್ವರ ಕತೃ ಗದ್ದುಗೆಗೆ ವಿಶೇಷ ಪೂಜೆ, ಆಧ್ಯಾತ್ಮ ಪ್ರವಚನ, ಮಹಾಮಂಗಲ, ಸಾಮೂಹಿಕ ವಿವಾಹ ಸಮಾರಂಭ ಹಾಗೂ ಅನ್ನ ಸಂತರ್ಪಣೆ ಬಳಿಕ ಗ್ರಾಮದ ಕಲಾವಿದರಿಂದ ರಾತ್ರಿ 10.30 ಗಂಟೆಗೆ 'ಹುಚ್ಚನ ಕಣ್ಣೀರು' ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದಿನಿಂದ ಯೋಗ ಶಿಬಿರ
ಗಜೇಂದ್ರಗಡ: ಸ್ಥಳೀಯ ಪತಂಜಲಿ ಯೋಗ ಸಮಿತಿ ವತಿಯಿಂದ ಉಚಿತ ಪ್ರಾಣಾಯಾಮ ಹಾಗೂ ಯೋಗ ವಿಜ್ಞಾನ ಶಿಬಿರವು ಏ. 15ರಿಂದ 21ರ ವರೆಗೆ ಪ್ರತಿದಿನ ಬೆಳಗ್ಗೆ 5ರಿಂದ 7 ಗಂಟೆಯ ವರೆಗೆ ಪಟ್ಟಣದ ಜ. ತೋಂಟದಾರ್ಯ ಶಾಲೆಯ ಆವರಣದಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಶರಣಪ್ಪ ಹಿರೇಮನಿ ನೆರವೇರಿಸುವರು. ಅಶೋಕ ಹೊನವಾಡ, ರಾಘವೇಂದ್ರ ಕುಲಕರ್ಣಿ, ಪ್ರಸಿದ್ಧ ಯೋಗ ಗುರುಸ್ವಾಮಿ, ರಾಮದೇವ ಬಾಬಾ ಅವರ ಶಿಷ್ಯರಾದ ಭವರಲಾಲ್ ಆರ್ಯ, ಬಿ.ಎಂ. ಹಿರೇಮಠ, ದ್ರಾಕ್ಷಾಯಣಿ, ಶಿವಕುಮಾರ ಮತ್ತಿತರರು ಯೋಗ ಶಿಕ್ಷಣ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448310074, 9980125148 ಇಲ್ಲಿಗೆ ಸಂಪರ್ಕಿಸುವಂತೆ ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.