ಡಾ. ಅಂಬೇಡ್ಕರ್ ಅಪ್ರತಿಮ ನಾಯಕ
ಕನ್ನಡಪ್ರಭ ವಾರ್ತೆ, ಗದಗ, ಏ. 14
ಹಲವು ದೇಶಗಳನ್ನು ಸಂಚರಿಸಿ ನಮ್ಮ ಭಾರತೀಯ ಸಂಸ್ಕೃತಿಗೆ ಅನುಗುಣವಾಗುವಂತೆ ಸಂವಿಧಾನವನ್ನು ರಚಿಸಿ, ಸಂವಿಧಾನ ಶಿಲ್ಪಿ ಎಂಬ ಹೆಸರು ಪಡೆದ ದಿಟ್ಟ ನಾಯಕ ಡಾ. ಬಿ.ಆರ್. ಅಂಬೇಡ್ಕರ್‌ರವರ ಸ್ಮರಣೆ ಸ್ತುತ್ಯಾರ್ಹವಾದುದು ಎಂದು ಗಣೇಶಸಿಂಗ್ ಬ್ಯಾಳಿ ಹೇಳಿದರು.
ಅವರು ಭಾನುವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ 2013-14ರ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ದೇಶ ಕಂಡ ವರ್ಣ ರಂಜಿತ ನಾಯಕನನ್ನು ನಾವೆಲ್ಲರೂ ಸ್ಮರಿಸುತ್ತ ಅವರ ತತ್ವ, ಆದರ್ಶಗಳನ್ನು ಪಾಲಿಸಲು ಪ್ರಯತ್ನಿಸೋಣ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯೆ ವೈ.ಆರ್. ಹಿರೇಗೌಡ್ರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್‌ರವರು ದೇಶಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರು ದೇಶಕಂಡ ಮಹಾನ್ ವ್ಯಕ್ತಿಯಾಗಿದ್ದು, ಅವರ ಆದರ್ಶಗಳನ್ನು ಇಂದಿವ ಯುವಜನತೆ ಅಳವಡಿಸಿಕೊಳ್ಳುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಬೇಕಾಗಿದೆ ಎಂದರು. ವಿದ್ಯಾ ಗೋಟೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಎಸ್.ಎಂ. ಹೂಗಾರ ಸ್ವಾಗತಿಸಿದರು. ಶಿಕ್ಷಕ ವಿ.ಜಿ. ಕಾಂಬಳೇಕರ ವಂದಿಸಿದರು.