ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೋಣ ಕ್ಷೇತ್ರಕ್ಕೆ ಡಂಬಳ ಹೋಬಳಿ ನಿರ್ಣಾಯಕ

Lingaraj Badiger
Updated On : 15 Apr 2013, 12:19 pm

-ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 14  
2008ರಲ್ಲಿ ಕ್ಷೇತ್ರ ಮರುವಿಂಗಡಣೆಯಿಂದಾಗಿ ಮುಂಡರಗಿ ಮತಕ್ಷೇತ್ರ ಒಡೆದು ಅರ್ಧಭಾಗ ಶಿರಹಟ್ಟಿ ಕ್ಷೇತ್ರಕ್ಕೆ ಇನ್ನರ್ಧ ಭಾಗ ರೋಣ ಕ್ಷೇತ್ರಕ್ಕೆ ಹರಿದು ಹಂಚಿ ಹೋಗಿದೆ. ಡಂಬಳ ಹೋಬಳಿ ರೋಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು ಪ್ರಸ್ತುತ ಚುನಾವಣೆಯಲ್ಲಿ ಈ ಹೋಬಳಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.
  2008ರ ಚುನಾವಣೆಯಲ್ಲಿ ವಿಜೇತರಾಗಿದ್ದ ಕಳಕಪ್ಪ ಬಂಡಿ ಅವರಿಗೆ 1800ಕ್ಕೂ ಹೆಚ್ಚು ಮತಗಳನ್ನು ನೀಡುವ ಮೂಲಕ ಡಂಬಳ ಹೋಬಳಿಗೆ ಬರುವ ಗ್ರಾಮಗಳ ಮತದಾರರು ಬಂಡಿಯವರ ಗೆಲುವಿಗೆ ಕಾರಣರಾಗಿದ್ದರು. ರೋಣ ಮತಕ್ಷೇತ್ರಕ್ಕೆ ಮುಂಡರಗಿ ತಾಲೂಕಿನ ಬರದೂರ, ಮೇವುಂಡಿ, ಡಂಬಳ, ಕದಾಂಪೂರ, ಡೋಣಿ, ಜಂತ್ಲಿ-ಶಿರೂರ,  ಹಿರೇವಡ್ಡಟ್ಟಿ, ಹಾರೋಗೇರಿ, ಮುರುಡಿ, ಕೆಲೂರ ಸೇರಿದಂತೆ 31 ಗ್ರಾಮಗಳು ಬರುತ್ತಿವೆ.
ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಚುನಾವಣೆಗೆ ಸಿದ್ಧಗೊಂಡಿದ್ದಾರೆ. 2008ರ ಚುನಾವಣೆಯನ್ನು ಇಬ್ಬರೂ ಅಭ್ಯರ್ಥಿಗಳು ರೋಣ ತಾಲೂಕಿನವರೇ ನೇರವಾಗಿ ಎದುರಿಸಿದ್ದರು. ಆದರೆ ಈ ಬಾರಿ ಜೆಡಿಎಸ್ ಪಕ್ಷದಿಂದ ಮುಂಡರಗಿ ತಾಲೂಕಿನ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಕೂಡ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಲಿದ್ದಾರೆ.
ಸೇರ್ಪಡೆ ಗಾಳಿ: ಡಂಬಳ ಹೋಬಳಿಯ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಕಾಂಗ್ರೆಸ್‌ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಇವೆರಡರಿಂದ ಜೆಡಿಎಸ್ ಪಕ್ಷಗಳಿಗೆ ಸೇರುವ ಕಾರ್ಯಕ್ರಮಗಳು ಈಗಾಗಲೇ ಶುಕ್ರವಾರ ಮೇವುಂಡಿ ಗ್ರಾಮದಲ್ಲಿ, ಶನಿವಾರ ಮುಂಡರಗಿಯಲ್ಲಿ ಡಂಬಳ, ಡೋಣಿ, ಮುರುಡಿ, ಮುರುಡಿತಾಂಡಾ, ಚಿಕ್ಕವಡ್ಡಟ್ಟಿ, ಗುಡ್ಡದ ಬೂದಿಹಾಳ, ಹಿರೇವಡ್ಡಟ್ಟಿ ಗ್ರಾಮಗಳ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಈ ಹಿಂದೆ ಮೇವುಂಡಿ, ಜಂತ್ಲಿ-ಶಿರೂರ, ಡ.ಸ.ರಾಮೇನಹಳ್ಳಿ, ಪೇಠಾಲೂರ ಗ್ರಾಮದಲ್ಲಿ ಅನೇಕ ಜನ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರಿದರೆ, ಹಿರೇವಡ್ಡಟ್ಟಿ, ಡಂಬಳ, ಹಾರೋಗೇರಿ, ಡೋಣಿ ಗ್ರಾಮದಲ್ಲಿ ಕೆಲವರು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement