ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ನಾಮಪತ್ರ ಸಲ್ಲಿಸುವೆ: ಬಂಡಿ

Lingaraj Badiger
Updated On : 16 Apr 2013, 11:59 am

ಗಜೇಂದ್ರಗಡ: ಏ. 16 ರಂದು ರೋಣ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಅವರು ಸೋಮವಾರ ಸ್ಥಳೀಯ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳಿಗೆ ಪ್ರಜ್ಞಾವಂತರು ಮತ ನೀಡಬಾರದು. ಅಭಿವೃದ್ಧಿ ಯೋಜನೆಗಳ ಮೂಲಕ ಸದಾ ಜನಸಾಮಾನ್ಯರ ಪ್ರಗತಿ ಬಯಸುವ ಬಿಜೆಪಿಯನ್ನು ಬೆಂಬಲಿಸಲು ಜನತೆ ಸನ್ನದ್ಧರಾಗಿದ್ದಾರೆ. ತಾವು ಶಾಸಕ, ಸಚಿವನಾಗಿ ಹಲವು ಅಭಿವೃದ್ಧಿ ಕಾರ್ಯಕೈಗೊಂಡಿದ್ದು, ಇನ್ನೂ ಹೆಚ್ಚಿನ ಸೇವೆ ಮಾಡುವ ಇಚ್ಚೆ ಹೊಂದಿದ್ದೇನೆ. ಮತದಾರರು ಮತ್ತೊಮ್ಮೆ ಅವಕಾಶ ನೀಡಲಿದ್ದಾರೆಂದರು. ಬಿ.ಎಂ. ಸಜ್ಜನ, ಬಿ.ಪಿ. ಮ್ಯಾಗೇರಿ, ಭಾಸ್ಕರ ರಾಯಬಾಗಿ, ಅಂಬರೀಶ ಅರಳಿ, ಅಂಬರೀಶ ಬಳಿಗಾರ ಉಪಸ್ಥಿತರಿದ್ದರು.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಎಸ್‌ಎಂಕೆ ನಗರದ ಕೆಲವು ಭಾಗಗಳಲ್ಲಿ, ಮಂಜುನಾಥ ನಗರ, ಕಣವಿ ಪ್ಲಾಟ್ ಈ ಭಾಗಗಳಲ್ಲಿ ಮಂಗಳವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
27 ನಾಮಪತ್ರ ಸಲ್ಲಿಕೆ
ಗದಗ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ ಸೋಮವಾರ ಒಟ್ಟು 27 ನಾಮಪತ್ರ ಸಲ್ಲಿಕೆಯಾಗಿವೆ. ಶಿರಹಟ್ಟಿ ಮತಕ್ಷೇತ್ರದಲ್ಲಿ 6 ನಾಮಪತ್ರ, ಗದಗ ಮತಕ್ಷೇತ್ರದಲ್ಲಿ 8, ರೋಣ ಮತಕ್ಷೇತ್ರದಲ್ಲಿ 6 ಹಾಗೂ ನರಗುಂದ ಮತಕ್ಷೇತ್ರದಲ್ಲಿ 7 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement