ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡಿದ್ದೇನೆ

Lingaraj Badiger
Updated On : 16 Apr 2013, 12:08 pm

ಲಕ್ಷ್ಮೇಶ್ವರ: ಬಿಜೆಪಿ ಸರ್ಕಾರದ ಸಾಧನೆಗಳು ತಮಗೆ ಶ್ರೀರಕ್ಷೆಯಾಗಲಿದೆ. ಮತಕ್ಷೇತ್ರದಲ್ಲಿ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹಿಂದೆಂದೂ ಕಂಡರಿಯದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ತಾವು ಮಾಡಿದ್ದಾಗಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಇತ್ತೀಚೆಗೆ ಸಮೀಪದ ಸೂರಣಗಿ ಗ್ರಾಮದಲ್ಲಿ ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನೂರಾರು ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದರು. ಬಿಜೆಪಿ ಆಡಳಿತ ಎಲ್ಲ ವರ್ಗಗಳ ಜನತೆಯ ಹಿತ ರಕ್ಷಿಸುವ ನಿಟ್ಟಿನಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿಯನ್ನು ಕಂಡು ಅನೇಕ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಸೂರಣಗಿ ಗ್ರಾಮದ ಮುಖಂಡ ಫಕ್ಕೀರಪ್ಪ ಶೀರನಳ್ಳಿ, ವಿಜಯ ಹಳ್ಳಿ, ಶಂಕ್ರಪ್ಪ ಶಿರನಳ್ಳಿ, ಚಂದ್ರಶೇಖರ, ಕಂಟೆಪ್ಪ ಕಳ್ಳಿಹಾಳ, ಚನ್ನಬಸಪ್ಪ ಬಿದರಳ್ಳಿ, ಹುಸೇನಸಾಬ ಕುರಿ, ಮಹ್ಮದಲಿ ನಾಯಕರ, ಹನುಮಂತಗೌಡ ಗೊಲ್ಲರ, ಮಹಾಂತೇಶ ದೊಡ್ಡಗೌಡ್ರ, ನೀಲಪ್ಪ ಕುರುಬರ, ಕಂಠೆಪ್ಪ ಬೆಟಗೇರಿ, ಸೋಮಣ್ಣ ಬೆಟಗೇರಿ, ನಾಗಪ್ಪ ಮೂಲಿಮನಿ, ಚಂದ್ರಪ್ಪ ಕಿಳ್ಳಿಕ್ಯಾತರ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement