ಪುರಸಭೆ ಸದಸ್ಯೆ ಜಯಶ್ರೀ ಕಾಂಗ್ರೆಸ್ ಸೇರ್ಪಡೆ
ರೋಣ: ರೋಣ ಪಟ್ಟಣದ ಪುರಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ 14ನೇ ವಾರ್ಡಿನಿಂದ ಸ್ಪರ್ಧಿಸಿ ಜಯಗಳಿಸಿದ್ದ ಸದಸ್ಯೆ ಜಯಶ್ರೀ ನವಲಗುಂದ ಇತ್ತೀಚೆಗೆ ಬಿಎಸ್ಆರ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಜಯಶ್ರೀ ನವಲಗುಂದ, ಶಿವಣ್ಣ ನವಲಗುಂದ, ವಿಜಯ ನವಲಗುಂದ, ಲೋಕಪ್ಪ ನವಲಗುಂದ ಅವರನ್ನು ರೋಣ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಐ.ಎಸ್. ಪಾಟೀಲ ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಜಯಶ್ರೀ ನವಲಗುಂದ ಮಾತನಾಡಿ, ರೋಣ ಪಟ್ಟಣ ಸಮಗ್ರವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲು ಎಲ್ಲರೂ ಕಾಂಗ್ರೆಸ್ ಕೈ ಬಲಪಡಿಸಬೇಕು. ಆ ದಿಶೆಯಲ್ಲಿ ನಾನು ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದರು.
ಐ.ಎಸ್. ಪಾಟೀಲ ಮಾತನಾಡಿ, ಕಾಂಗ್ರೆಸ್ ಮಹಿಳೆಯರಿಗೆ ಆದ್ಯತೆ ಕಲ್ಪಿಸಿದೆ. ಮಹಿಳೆಯರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು. ಕೆಂಚಪ್ಪ ಗಡಗಿ, ಬಸವರಾಜ ಸುಂಕದ, ಸಾನಿ ಅಭಿಯಂತರ, ಅಪ್ಪು ಗಿರಡ್ಡಿ, ವೀರಣ್ಣಾ ಹೊರಕೇರಿ, ಪ್ರಕಾಶ ಹಾಲಣ್ಣವರ, ಅಶೋಕ ಗಡಗಿ, ರಾಜು ಬಳಗಾನೂರ, ಶಿವು ಹುಲ್ಲೂರ, ಬಸವರಾಜ ಧರ್ಮಾಯತ ಮುಂತಾದವರು ಉಪಸ್ಥಿತರಿದ್ದರು.