ಬಿ.ಆರ್. ಯಾವಗಲ್ ಉಮೇದುವಾರಿಕೆ
ನರಗುಂದ: ನರಗುಂದ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ ಸೋಮವಾರ ಪಟ್ಟಣದ ಪುರಸಭೆಯಿಂದ ಚಕ್ಕಡಿ ಮೂಲಕ ಬೃಹತ್ ಮೆರವಣಿಗೆ ನಡೆಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನರಗುಂದ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಡುವ ರೋಣ ತಾಲೂಕು, ಗದಗ ತಾಲೂಕಿನ ಹಲವಾರು ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗುರುಪಾದಪ್ಪ ಕುರಹಟ್ಟಿ, ಎಸ್.ಡಿ. ಕೊಳ್ಳಿ, ಮಾರುತಿ ಮೇಟಿ, ಹೊಳೆಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ, ರಾಜು ಕಲಾಲ, ಎಫ್.ವೈ. ದೊಡಮನಿ, ರಾಜಪ್ಪ ಅಳಗವಾಡಿ, ಸಿ.ಬಿ. ಪಾಟೀಲ, ದೀಪಕ ಗೋಡ್ಸೆ, ಜಗದೇಶ ರಾಯನಗೌಡ್ರ, ಮಾರುತಿ ಮೇಟಿ, ಬಸಪ್ಪ ನರಗುಂದ, ದ್ಯಾಮಣ್ಣ ಸವದತ್ತಿ, ದ್ಯಾಮಣ್ಣ ಕಾಡಪ್ಪನವರ ದೇಸಾಯಗೌಡ ಪಾಟೀಲ, ಗುರು ದೊಡಮನಿ, ಚಂದ್ರು ಮೊರಬದ, ವಿ.ಎಸ್. ವೀರನಗೌಡ್ರ, ಹಾಲಿ ಮಾಜಿ ಜಿಪಂ, ತಾಪಂ, ಗ್ರಾಪಂ, ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.