ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿರಹಟ್ಟಿ: ಲಮಾಣಿ ಕಣಕ್ಕೆ

Lingaraj Badiger
Updated On : 16 Apr 2013, 11:58 am

ಶಿರಹಟ್ಟಿ: ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಸಾರ್ ಕಾಂಗ್ರೆಸ್‌ನಿಂದ ತಲಾ ಒಬ್ಬರು, ಪಕ್ಷೇತರರಾಗಿ ಇಬ್ಬರು ಸೇರಿ ಒಟ್ಟು ಆರು ಅಭ್ಯರ್ಥಿಗಳು ಸೋಮವಾರ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ತಮ್ಮ ಅಪಾರ ಬೆಂಬಲಿಗರು, ಅಭಿಮಾನಿಗಳೊಂದಿಗೆ ಸೋಮವಾರ ಪಟ್ಟಣದ ಜ. ಫಕೀರೇಶ್ವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆಗಮಿಸಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡರ, ಕಮಲವ್ವ ಸಜ್ಜನರ, ತಾಪಂ ಸದಸ್ಯ ನಿಂಬಣ್ಣ ಮಡಿವಾಳರ, ತಿಮ್ಮರಡ್ಡಿ ಅಳವಂಡಿ, ಬಸಣ್ಣ ಹತ್ತಿಕಾಳ, ರಾಮಣ್ಣ ಡಂಬಳ, ಚಂಬಣ್ಣ ಬಾಳಿಕಾಯಿ, ಆರ್.ಎಫ್. ಪುರಾಣಿಕಮಠ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಶಶಿಧರ ರಾನಡೆ ಇದ್ದರು.
ಜೆಡಿಎಸ್‌ದಿಂದ ಗುರಪ್ಪ ಶಿದ್ದಪ್ಪ ವಡ್ಡರ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚುನಾವಣಾ ಅಧಿಕಾರಿಗಳಿಗೆ ಅಧಿಕೃತ ಬಿ ಫಾರಂನೊಂದಿಗೆ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಾಲೂಕಾಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ಶಂಕ್ರಪ್ಪ ಬಾರಿಕಾಯಿ, ಎಂ.ಜಿ. ವಡ್ಡಟ್ಟಿ, ಪಪಂ ಸದಸ್ಯ ಸಿ.ಕೆ. ಮುಳಗುಂದ, ನಜೀರ ಡಂಬಳ, ಅಕ್ಬರ್ ಯಾದಗಿರಿ, ಶಂಕ್ರಣ್ಣ ಬಾಳಿಕಾಯಿ ಇದ್ದರು.
ಬಿಎಸ್ಸಾರ್ ಕಾಂಗ್ರೆಸ್‌ನಿಂದ ಜಯಶ್ರೀ ಹಳ್ಳೆಪ್ಪನವರ ನಾಮಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ, ಸಣ್ಣವೀರಪ್ಪ ಹಳ್ಳೆಪ್ಪನವರ, ಅಶೋಕ ಪಲ್ಲೇದ ಇತರರು ಇದ್ದರು.
ಕಾಂಗ್ರೆಸ್‌ನಿಂದ ರಾಮಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ, ವೈ.ಎಸ್. ಪಾಟೀಲ್, ಹುಮಾಯೂನ್ ಮಾಗಡಿ, ದೇವಪ್ಪ ಲಮಾಣಿ, ಲಕ್ಷ್ಮಣಗೌಡ ಪಾಟೀಲ್, ಚನ್ನಪ್ಪ ಜಗಲಿ ಮುಂತಾದವರು ಉಪಸ್ಥಿತರಿದ್ದರು.
ಪಕ್ಷೇತರ ಅಭ್ಯರ್ಥಿಗಳಾಗಿ ಹನುಮಂತಪ್ಪ ಬಂಡಿವಡ್ಡರ, ಶೇಖಪ್ಪ ಭೋಜಪ್ಪ ಲಮಾಣಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರಲ್ಲದೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಜಯಘೋಷ, ಕೇಕೆ, ಶಿಳ್ಳೆ ಹಾಕಿದರು. ಆದರೂ ನೀತಿ ಸಂಹಿತೆ ಉಲ್ಲಂಘನೆ ಕುರಿತು ಯಾವುದೇ ಪ್ರಕರಣ ದಾಖಲಿಸಿಲ್ಲ. ಶಾಂತತೆ ಕಾಪಾಡಲು ಪೊಲೀಸರು ಹರಸಾಹಸಪಟ್ಟರು. ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿಲ್ಲ ಎಂಬ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿ ಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement