ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಗ್ನಿ ಹಾಯುವಾಗ ಕಾಲು ಸುಟ್ಟುಕೊಂಡ ಭಕ್ತರು

Lingaraj Badiger
Updated On : 17 Apr 2013, 1:04 am

ಮುಂಡರಗಿ:  ತಾಲೂಕಿನ ಸಿಂಗಟಾಲೂರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದ್ದ ಅಗ್ನಿ ಹಾಯುವ ಕಾರ್ಯಕ್ರಮದಲ್ಲಿ 12ಕ್ಕೂ ಹೆಚ್ಚ ಜನರು ಅಗ್ನಿ ಕುಂಡದಲ್ಲಿ ಹಾಯ್ದರು. ಈ ವೇಳೆ ಭಕ್ತರ ಮಧ್ಯೆ ಉಂಟಾದ ನೂಕಾಟದಲ್ಲಿ ಇಬ್ಬರು ಗಾಯಗೊಂಡು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲೂಕಿನ ಶಿಂಗಟಾಲೂರು ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ನಡೆದ ಮಾರನೇ ದಿನ ಮುಂಜಾನೆ ಭಕ್ತರು ಅಗ್ನಿಕುಂಡದಲ್ಲಿ ಅಗ್ನಿ ಹಾಯುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾಗ ಇಬ್ಬರು ಭಕ್ತರು ಆಕಸ್ಮಿಕವಾಗಿ ಉಂಟಾಗ ತಳ್ಳಾಟದಿಂದ ಅಗ್ನಿಕುಂಡಕ್ಕೆ ಬಿದ್ದು ಕಾಲು ಸುಟ್ಟುಕೊಂಡಿದ್ದಾರೆ. ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಪೊಲೀಸರು, 108 ವಾಹನದ ಸಿಬ್ಬಂದಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ವೀರಭದ್ರಗೌಡ ಪಾಟೀಲ ಹಾಗೂ ಸಿಬ್ಬಂದಿ ತಕ್ಷಣ ಚಿಕಿತ್ಸೆ ಕೊಡಿಸಲು ನೆರವಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement