ನಾಲ್ವರು ಪಕ್ಷೇತರರಿಂದ ನಾಮಪತ್ರ
ಶಿರಹಟ್ಟಿ: ಶಿರಹಟ್ಟಿ ಮೀಸಲು ವಿಧಾನಸಭೆ ಕ್ಷೇತ್ರಕ್ಕೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಅಧಿಕಾರಿ ಟಿ. ದಿನೇಶ ಅವರಿಗೆ ಮಂಗಳವಾರನಾಮಪತ್ರ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಫಕೀರಪ್ಪ ದಂಡಪ್ಪ ಭಜಕ್ಕನವರ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು, 16 ವರ್ಷಗಳಿಂದ ಸಮಾಜ ಸೇವೆ ಮಾಡುತ್ತ ಬಂದಿದ್ದು, ಕಲುಷಿತಗೊಂಡ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಸ್ಪರ್ಧೆಗಿಳಿದಿದ್ದೇನೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಮತ್ತು ಬಂಡವಾಳ ಶಾಹಿಗಳು ಕೋಟಿಗಟ್ಟಲೇ ಹಣ ಸುರಿಯುತ್ತಾರೆ. ಪ್ರಜ್ಞಾವಂತ ಮತದಾರರು ಯಾವುದೇ ಅಮಿಷಕ್ಕೆ ಒಳಗಾಗದೇ ಯೋಗ್ಯ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಗುಡ್ಡಪ್ಪ ಪುತ್ತೂರ, ರಾಮಚಂದ್ರ ಜಂಗಳಿ, ಅಶೋಕ ಕೆರೆಕೊಪ್ಪದ, ರಾಜೇಶ ಕಮತದ, ಗಾಳೆಪ್ಪ ತೆಂಬದಮನಿ, ಭರಮಪ್ಪ ಮಾದರ, ಹುಲಗಪ್ಪ ಪೂಜಾರ ಮತ್ತಿತರರು ಇದ್ದರು.
ದೊಡ್ಡಹುಚ್ಚಪ್ಪ ದೊಡ್ಡಯಲ್ಲಪ್ಪ ಸಂದಕದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಫಕೀರೇಶ ಬಂಡಿವಡ್ಡರ, ಹೇಮಪ್ಪ ಅಂಗಡಿ, ಸೋಮಪ್ಪ ಬಂಡಿವಡ್ಡರ, ಹುಲಿಗೆಪ್ಪ ವಡ್ಡರ, ಶಿವಯ್ಯ ಪೂಜಾರ, ಶಂಭುಲಿಂಗ ಕಟ್ಟಿಮನಿ, ಶರಣಪ್ಪ ಪ್ಯಾಟಿ, ಮಹಾದೇವಪ್ಪ ಹೂಗಾರ, ಇಬ್ರಾಹಿಂ ಡಾಲಾಯತ್ ಮತ್ತಿತರರು ಇದ್ದರು. ಪರಶುರಾಮ ಪುಟ್ಟಪ್ಪ ಭಜಂತ್ರಿ ಪಕ್ಷೇತರ ನಾಮಪತ್ರ ಸಲ್ಲಿಸಿದ್ದಾರೆ. ಚಂದ್ರಶೇಖರ ಪೋತರಾಜ, ಮಲಕಾಜಪ್ಪ ಪಟ್ಟಣಶೆಟ್ಟಿ, ಈಶ್ವರಪ್ಪ ಭಜಂತ್ರಿ, ಬಸಪ್ಪ ಭಜಂತ್ರಿ, ಜಂಜಪ್ಪ ಮ್ಯಾಗೇರಿ, ವೆಂಕಟೇಶ ದೊಡ್ಡಮನಿ, ಬಸಪ್ಪ ನೀಲಗುಂದ, ಯಲ್ಲಪ್ಪ ಭಜಂತ್ರಿ, ಸಂಜೀವಕುಮಾರ ಪೋತರಾಜ ಮತ್ತಿತರರು ಇದ್ದರು. ಮಲ್ಲಪ್ಪ ತಿರಕಪ್ಪ ಮಾಳಮ್ಮನವರ ಪಕ್ಷೇತರ ನಾಮಪತ್ರ ಸಲ್ಲಿಸಿದ್ದಾರೆ. ಮೈಲಾರೆಪ್ಪ ಸತ್ಯಮ್ಮನವರ, ದ್ಯಾಮಣ್ಣ ಬೈರಮ್ಮನವರ, ನೀಲಪ್ಪ ಮಾದರ, ದ್ಯಾಮಪ್ಪ ಹಳ್ಳೆಮ್ಮನವರ, ಮಾರುತಿ ಮಲ್ಲಾಡದ, ಹಾಲಪ್ಪ ಸಜ್ಜನರ, ಭೀಮಪ್ಪ ಮಾಳಮ್ಮನವರ, ಶೇಕಪ್ಪ ಮಲ್ಲಾಡದ ಮುಂತಾದವರು ಪಾಲ್ಗೊಂಡಿದ್ದರು.