ಪ್ರಕಾಶ ಕರಿ ಉಮೇದುವಾರಿಕೆ
ನರಗುಂದ: ಪಟ್ಟಣದ ಪುರಸಭೆಯ ಎದುರಿಗೆ ಇರುವ ಸ್ವಾತಂತ್ರ್ಯ ಹೋರಾಟಗಾರ ವೀರ ಬಾಬಾಸಾಹೇಬರ ಮೂರ್ತಿಗೆ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಪ್ರಕಾಶ ಕರಿ ಮಾಲಾರ್ಪಣೆ ಸಲ್ಲಿಸಿ, ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಯುವ ಮುಖಂಡ ಹನುಮಂತಗೌಡ ಕಲ್ಮನಿ, ಜಿಲ್ಲಾ ಜೆಡಿಎಸ್ ವಕ್ತಾರ ದಾವಲ್ ಮುಳಗುಂದ, ಶ್ರೀಪಾದ ಆನೇಗುಂದಿ, ಎಂ.ಎಂ. ಜಾವೂರ, ವೆಂಕಣ್ಣ ಹೂಲಿ, ಪ್ರಭುರಾಜಗೌಡ ಪಾಟೀಲ, ವೀರಣ್ಣ ಅಂಗಡಿ, ಶಿವಪ್ಪ ಕರಟ್ಟಿ, ನಿಂಗನಗೌಡ ನಡಿವಿನಮನಿ, ರಮೇಶ ಬಾವಿ, ರಾಜಣ್ಣ ಬಾಲಮ್ಮನವರ ಮುಂತಾದವರು ಉಪಸ್ಥಿತರಿದ್ದರು.
--