ರೋಣ: 6 ನಾಮ ಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ರೋಣ, ಏ. 16
ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧಿಸಲು ಮಂಗಳವಾರ 6 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಕಳಕಪ್ಪ ಬಂಡಿ 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕೆಜೆಪಿಯ ಶರಣಬಸಪ್ಪ ಮಣಸಿನಕಾಯಿ, ಲೋಕಜನ ಶಕ್ತಿ ಪಾರ್ಟಿಯ ಫಕೀರಪ್ಪ ತೆಗ್ಗಿನಮನಿ ಮತ್ತು ಶುಭ ಕರ್ನಾಟಕ ಪಾರ್ಟಿಯ ಮೊತಿಲಾಲಸಾ ಮಲಜಿ ಇವರು ತಲಾ 1 ನಾಮಪತ್ರ ಸಲ್ಲಿಸಿದ್ದಾರೆ. ಈ ವರೆಗೂ ಒಟ್ಟು 14 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ 8 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆಂದು ಚುನಾವಣಾಧಿಕಾರಿ ಎನ್.ಆರ್. ಉಮೇಶ ತಿಳಿಸಿದರು. ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ಎನ್.ಎಸ್. ಕೂಡಲ ಮತ್ತು ಸಿ.ಎನ್. ಜಟ್ಟೆನ್ನವರ ಚುನಾವಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು.