ಕೆಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ನರಗುಂದ: ನರಗುಂದ ಮತಕ್ಷೇತ್ರದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾದ ಕೆ.ಎಸ್. ಪರ್ವತಗೌಡರ ಬುಧವಾರ ಪಟ್ಟಣದ ಪುರಸಭೆಯ ಮುಂಭಾಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಭವ್ಯ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿವಿಧಾನ ಸಭೆಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಾಪುಗೌಡ ದಾನಪ್ಪಗೌಡ್ರ, ಬಸವರಾಜ ತಾಳದವರ, ರಾಮಕೃಷ್ಣ ಗೊಂಬಿ, ಚನ್ನಪ್ಪಗೌಡ್ರ ಚಿನ್ನಪ್ಪಗೌಡ್ರ, ಶ್ರೀಶೈಲಗೌಡ, ಮುತ್ತು ಹದ್ಲಿ ಉಪಸ್ಥಿತರಿದ್ದರು.
ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ನರಗುಂದ: ನರಗುಂದ ವಿಧಾನಸಭಾ ಮತಕ್ಷೇತ್ರದ ಬಿಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಎಚ್. ಶಿವನಗೌಡ್ರ ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಂಚರಿಸಿ ಮಿನಿ ವಿಧಾನಸಭೆಗೆ ತೆರಳಿ ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಲೀಲಕ್ಕ ಹಸಿಬಿ, ರವಿ ಪೂಜಾರ, ಮಹೇಶಗೌಡ ಮೇಟೆ, ಸಾಧಿಕ ಮನಿಯಾರ, ರವಿ ಮಟ್ಟಗುಡ್ಡಿ, ಕುಬೇರಪ್ಪ ಅರಹುಣಸಿ, ವಾನಂದಮ್ಮ ಹಿರೇಮಠ ಪಾಲ್ಗೊಂಡಿದ್ದರು.