ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಎಸ್ಸಾರ್‌ನಿಂದ ಅನಿಲ ಮೆಣಸಿನಕಾಯಿ ಉಮೇದುವಾರಿಕೆ

Lingaraj Badiger
Updated On : 18 Apr 2013, 11:51 am

ಕನ್ನಡಪ್ರಭ ವಾರ್ತೆ, ಗದಗ, ಏ. 17
ಗದಗ ವಿಧಾನಸಭಾ ಮತಕ್ಷೇತ್ರದ ಬಿಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಬುಧವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಗದಗ ವಿಧಾನಸಭಾ ಮತಕ್ಷೇತ್ರದ ಕಲ್ಲೂರ ಗ್ರಾಮದ ಹೊನ್ನತ್ತೆಮ್ಮನ ದೇವಸ್ಥಾನ ಸೇರಿದಂತೆ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯಾಪ್ತಿಯ ಬಹುತೇಕ ದೇವಾಲಯಗಳಲ್ಲಿ ಹಾಗೂ ನಗರದ ಜುಮ್ಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅನಿಲ ಮೆಣಸಿನಕಾಯಿ, ನಂತರ ನಗರದಲ್ಲಿ ತೆರೆದ ವಾಹನದ ಮೂಲಕ ಗದಗ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಗಮನ ಸೆಳೆದ ಯುವಕರು: ಬಿ.ಎಸ್.ಆರ್. ಸಂಸ್ಥಾಪಕ ಬಿ.ಶ್ರೀರಾಮುಲು ಗದಗ ನಗರದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ, ಅದರಲ್ಲಿಯೂ ಯುವಕರು ಹೆಚ್ಚಾಗಿ ಶ್ರೀರಾಮುಲು ಅವರನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಬುಧವಾರದ ಮೆರವಣಿಗೆ ಸಾಕ್ಷಿಯಾಯಿತು. ಮೆರವಣಿಗೆಯಲ್ಲಿ 8 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ಮೂಲಕ  ಬಳ್ಳಾರಿಗಿಂತ ಗದಗ ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಭಾವವನ್ನು ಹೊಂದಿರುವುದು ಸಾಕ್ಷಿಯಾಯಿತು.
ಡೊಳ್ಳಿನ ಮೇಳ, ಜಾಂಜ್ ಮೇಳ, ಕುಂಭಮೇಳದೊಂದಿಗೆ ನಡೆದ ಮೆರವಣಿಗೆಯು ನಗರದ ಮಹಾತ್ಮಗಾಂಧಿ ವೃತ್ತ, ಡಾ. ಬಾಬಾಸಾಹೇಬ ಅಂಬೇಡ್ಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಕಿತ್ತೂರ ಚನ್ನಮ್ಮ ವೃತ್ತದ ಮೂಲಕ ಗದಗ ಉಪವಿಭಾಗಧಿಕಾರಿ ಕಚೇರಿಗೆ ತೆರಳಿದರು. ಮೆರವಣಿಗೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಟಿ. ಮೇಲಗೇರಿ, ನಗರಸಭೆ ಸದಸ್ಯ ಎಂ.ಎಚ್. ಮುಳಗುಂದ, ಮಲ್ಲಿಕಾರ್ಜುನ ಐಲಿ, ಸಂತೋಷ್ ಮೇಲಗೇರಿ, ಬಸವರಾಜ ಕೋಟೆ, ಕಾಂತೇಶ ಹಾನಗಲ್, ಮಂಜುನಾಥ ಮ್ಯಾಗೇರಿ, ಬಸವಣ್ಣೆಯ್ಯ ಹಿರೇಮಠ, ಸತೀಶ ಮುದಗಲ್, ಬಸವಣ್ಣಯ್ಯ ಹಿರೇಮಠ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement