ರೋಣ ಮಾದರಿ ಕ್ಷೇತ್ರ ಮಾಡುವೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 17
ರಾಜ್ಯದ ಸರ್ವತೋಮುಖ ಅಭಿವೃದ್ಧಿ ಜತೆಗೆ ರೋಣವನ್ನು ಮಾದರಿ ಕ್ಷೇತ್ರವನ್ನಾಗಿಸುವ ಮಹತ್ವದ ಕನಸು ನನಸಾಗಿಸಲು ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವಂತೆ ಪಕ್ಷದ ಅಭ್ಯರ್ಥಿ ಕಳಕಪ್ಪ ಬಂಡಿ ಮನವಿ ಮಾಡಿದರು.
ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ದಿಂಡೂರ ಗ್ರಾಮದ ಪ್ರಮುಖರನ್ನು ಪಕ್ಷದ ಬಾವುಟ ನೀಡಿ ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಬಂಡಿ, ಸ್ವಾರ್ಥ ಸಾಧನೆಯಲ್ಲೇ ಮುಳುಗೆದ್ದ ಕಾಂಗ್ರೆಸ್ ಅಭಿವೃದ್ಧಿ ಮಾಡದೆ, ಜನರ ಸಂಕಷ್ಟಕ್ಕೆ ಸ್ಪಂದಿಸದೆ ಆಡಳಿತ ನಡೆಸಿತ್ತು. ಈ ಧೋರಣೆ ಖಂಡಿಸಿ ಜನತೆ ಬಿಜೆಪಿಗೆ ಆಶೀರ್ವದಿಸಿದ ಪರಿಣಾಮ ರಾಜ್ಯದಲ್ಲಿ ಅಭೂತಪೂರ್ವ ಆಡಳಿತ ಆಗಿದೆ. ಅಭಿವೃದ್ಧಿ ವಂಚಿತ ರೋಣ ಮತಕ್ಷೇತ್ರದಲ್ಲಿ ಕಳೆದ 9 ವರ್ಷಗಳಲ್ಲಾದ ಜನಪರ ಕಾರ್ಯಗಳು ವಿರೋಧಿಗಳನ್ನೂ ಮೆಚ್ಚಿಸಿವೆ. ಹೀಗಾಗಿ, ಜನತೆ ಮತ್ತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹ್ಯಾಟ್ರಿಕ್ ಗೆಲವು ಸಾಧಿಸಲಿದೆ ಎಂದರು.
ದಿಂಡೂರ ಗ್ರಾಮದ ಯಮನಪ್ಪ ಮಾದರ, ಪರಸಪ್ಪ, ಬುರುಳಪ್ಪ, ಮೂಕಪ್ಪ, ಕಳಕಪ್ಪ, ಸಂತಪ್ಪ, ರೇಣಪ್ಪ, ಮಲ್ಲಪ್ಪ, ಈರಪ್ಪ, ಮುದಕಪ್ಪ, ಯಮನಪ್ಪ, ಶಿವಪ್ಪ, ರಾಮಣ್ಣ, ಹುಚ್ಚಪ್ಪ, ಪಾಂಡಪ್ಪ ಮಾದರ ಬಿಜೆಪಿ ಸೇರಿದರು. ಅಂಬರೀಶ ಬಳಿಗೇರ, ಕನಕಪ್ಪ ಪೂಜಾರ, ಬಾಳು ಗೌಡರ, ಮಹಾಂತೇಶ ಶಿಗರಿ, ಶಂಕರ ಇಂಜನಿ, ವೀರೇಶ ಬಳಿಗೇರ ಪಾಲ್ಗೊಂಡಿದ್ದರು.