ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಾವಿನಾಳ ನಾಮಪತ್ರ ಸಲ್ಲಿಕೆ

Lingaraj Badiger
Updated On : 18 Apr 2013, 11:46 am

ಕನ್ನಡಪ್ರಭ ವಾರ್ತೆ, ರೋಣ, ಏ. 17
ರೋಣ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಸಹಸ್ರಾರು ಅಭಿಮಾನಿ, ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ಮಾಡುವ ಮೂಲಕ ಬುಧವಾರ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಜತೆ ವಿಪ ಸದಸ್ಯ ಬಸವರಾಜ ಹೊರಟ್ಟಿ, ರವಿ ಹಾವಿನಾಳ ಇದ್ದರು.
ಪಟ್ಟಣದ ಸೂಡಿ ರಸ್ತೆಯಲ್ಲಿರುವ ಶಿವಾನಂದ ಮಠದಿಂದ ಆರಂಭಗೊಂಡ ಭವ್ಯ ಮೆರವಣಿಗೆಯೂ ಸೂಡಿ ಕ್ರಾಸ್ ಮತ್ತು ಮುಲ್ಲಾನ ಬಾವಿ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿತು. ರೈತರು ಎತ್ತಿನ ಚಕ್ಕಡಿಗಳೊಂದಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ಮೆರವಣಿಗೆಯಲ್ಲಿ ಚಕ್ಕಡಿ ಮತ್ತು ವಾಹನದಲ್ಲಿ ಹೊರೆ ಹೊತ್ತ ಮಹಿಳಾ ವೇಷಧಾರಿಗಳು ಆಕರ್ಷಕ ಕೇಂದ್ರ ಬಿಂದುಗಳಾಗಿದ್ದರು. ಪಕ್ಷದ ಅಭಿಮಾನಿ, ಕಾರ್ಯಕರ್ತರು ಸುಡುವ ಬಿಸಿಲನ್ನು ಲೆಕ್ಕಿಸದೇ ಜೈಕಾರ ಕೂಗುತ್ತಿದ್ದರು. ಯುವಕ ಮತ್ತು ಯುವತಿಯರಿಂದ ಕೋಲಾಟ, ಜಾಂಜ್ ಮೇಳ, ಡೊಳ್ಳು ಕುಣಿತ ಸೇರಿದಂತೆ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಜಣ್ಣ ಕೊರವಿ, ಡಾ. ಮಂಜುನಾಥ ವಿಶ್ವಬ್ರಾಹ್ಮಣ, ಜೆಡಿಎಸ್ ತಾಲೂಕಾಧ್ಯಕ್ಷ ರಾಮಣ್ಣ ಸಕ್ರೋಜಿ, ಮಹಾದೇವಪ್ಪ ನವಲಗುಂದ, ನಿಂಗಪ್ಪ ನವಲಗುಂದ, ಮೈಲಾರಪ್ಪ ದೇಶಣ್ಣವರ, ಉಮೇಶ ಮಲ್ಲಾಪುರ, ಬಿ.ಎಸ್. ಹಿರೇಗೌಡ್ರ, ದಾವದಲಿ ಕುದರಿ, ಅನ್ನಪ್ಪ ಜೋಳದ, ಮುತ್ತಪ್ಪ ಅಕ್ಕಿ, ಸಂಗಣ್ಣ ಹಳ್ಳಿ, ದೇವಪ್ಪ ಕಂಬಳಿ, ಬಸವರಾಜ ಸಂಪಂಗಿ, ಶಿವನಗೌಡ ಗೌಡರ, ರಾಮಣ್ಣ ಬನ್ನಿಮರದ ಪಾಲ್ಗೊಂಡಿದ್ದರು.

ಈ ಬಾರಿ ರಾಜ್ಯದಲ್ಲಿಯೇ ಜೆಡಿಎಸ್‌ಗೆ ಉತ್ತಮ ಭವಿಷ್ಯವಿದೆ. ಜೆಡಿಎಸ್‌ಗೆ ಕಾಂಗ್ರೆಸ್ ಮಾತ್ರ ನೇರ ಸ್ಪರ್ಧೆಯಾಗಿದ್ದು, ಇನ್ನುಳಿದಂತೆ ಬಿಜೆಪಿ, ಬಿಎಸ್‌ಆರ್, ಕೆಜೆಪಿ ಸೇರಿದಂತೆ ಇತರ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ. ಬಿಜೆಪಿಯನ್ನು ಜನತೆ ಅಧಿಕಾರಕ್ಕೆ ತಂದು ಪ್ರಾಯಶ್ಚಿತ ಪಟ್ಟಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಯುಪಿಎ ಆಡಳಿತಕ್ಕೆ ಬೇಸತ್ತಿದ್ದು, ರೋಣ ಮತಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ.
-ಬಸವರಾಜ ಹೊರಟ್ಟಿ,ವಿಪ ಸದಸ್ಯ

ರೋಣ ಕ್ಷೇತ್ರದಲ್ಲಿ ಜನತೆ ಬದಲಾವಣೆಯನ್ನು ಬಯಸುತ್ತಿದ್ದು, ಈ ಬಾರಿ ಜೆಡಿಎಸ್‌ಗೆ ಆಶೀರ್ವದಿಸಲಿದ್ದಾರೆ. ಕ್ಷೇತ್ರಾದ್ಯಂತ ಹೋದಲ್ಲೆಲ್ಲ ಜೆಡಿಎಸ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜನತೆ ಆಶೀರ್ವದಿಸಿದಲ್ಲಿ ರೈತರ, ದೀನ ದಲಿತರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
-ಹೇಮಗಿರೀಶ ಹಾವಿನಾಳ, ಜೆಡಿಎಸ್ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement