ಇಂದು ಬಿಜೆಪಿ ಕಾರ್ಯಾಲಯ ಉದ್ಘಾಟನೆ
ಮುಂಡರಗಿ: ಪಟ್ಟಣದ ಸಂತೋಷ ಚಿತ್ರಮಂದಿರದ ಹತ್ತಿರ ಏ. 19ರ ಸಂಜೆ 4 ಗಂಟೆಗೆ ಬಿಜೆಪಿ ಕಾರ್ಯಾಲಯ ಉದ್ಘಾಟನೆಯಾಗಲಿದೆ. ಉದ್ಘಾಟನೆಯನ್ನು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ನೆರವೇರಿಸುವರು.
ಅಧ್ಯಕ್ಷತೆಯನ್ನು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ವಹಿಸುವರು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡರಗಿ ಹೋಬಳಿಯ ಎಲ್ಲ ಪುರಸಭೆ, ಗ್ರಾಪಂ, ತಾಪಂ ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮಂಜುನಾಥ ಕಾಗನೂರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗೂಸಾ ದೊಡ್ಡುಸಾ ರಾಯಬಾಗಿ ನಿಧನ
ಗಜೇಂದ್ರಗಡ: ಸ್ಥಳೀಯ ಹಿರಿಯ ವರ್ತಕ ನಾಗೂಸಾ ದೊಡ್ಡುಸಾ ರಾಯಬಾಗಿ (80) ಗುರುವಾರ ನಿಧನರಾದರು. ಮೃತರು ಪತ್ನಿ, ಐವರು ಪುತ್ರರಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಭಾಸ್ಕರ್ ರಾಯಬಾಗಿ ಓರ್ವರಾಗಿದ್ದಾರೆ. ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗ ಹೊಂದಿದ್ದಾರೆ. ಇವರ ನಿಧನಕ್ಕೆ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಜಿ.ಎಸ್. ಪಾಟೀಲ, ಆರ್.ಎಸ್. ಪಾಟೀಲ ಸಂತಾಪ ಸೂಚಿಸಿದರು.