ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 18
ದೇಶ ಆಳುತ್ತಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯಗಳ ಅಭಿವೃದ್ಧಿಯನ್ನು ಕಡೆಗಣಿಸಿವೆ. ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಕುರ್ಚಿಗಾಗಿ ಕಿತ್ತಾಟ ಮಾಡಿ ಕಾಲಹರಣ ಮಾಡಿದೆ. ಅದಕ್ಕಾಗಿ ರಾಷ್ಟ್ರೀಯ ಪಕ್ಷಗಳ ಸಹವಾಸದಿಂದ ಜನತೆ ಬೇಸತ್ತಿದ್ದಾರೆಂದು ಶಿರಹಟ್ಟಿ ಮೀಸಲು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹನುಮಂತಪ್ಪ ಬಂಡಿವಡ್ಡರ ಹೇಳಿದರು.
ಅವರು ಸೋಮವಾರ ಪಟ್ಟಣದ ಬಜಾರ್ ರಸ್ತೆಯಲ್ಲಿ ಮತಯಾಚನೆ ಮಾಡುವ ಮೂಲಕ ತಮ್ಮ ಪ್ರಚಾರ ಪ್ರಾರಂಭಿಸಿ ಮಾತನಾಡಿದರು. ಶಿರಹಟ್ಟಿ ತಾಲೂಕಿನಲ್ಲಿ ಸ್ಪರ್ಧಿಸಿ ಜನರ ಸೇವೆ ಮಾಡಬೇಕು ಎಂದು ಹಂಬಲಿಸಿ ನಾಮ ಪತ್ರ ಸಲ್ಲಿಸಿದ್ದೇನೆ. ಕೇವಲ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಜನರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, ಇಂಥ ಪಕ್ಷಗಳು ಇದುವರೆಗೆ ರಾಜ್ಯಕ್ಕೆ ಮತ್ತು ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕೇವಲ ತಮ್ಮ ಪಕ್ಷ ಹಾಗೂ ನಾಯಕರು ಮಾತ್ರ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾನು ಪಕ್ಷೇತರನಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ನನಗೆ ಮತ ನೀಡಿ ನಿಮ್ಮ ಸೇವೆ ಮಾಡಲು ಅನುಕೂಲ ಮಾಡಿಕೊಡುವಂತೆ ವಿನಂತಿಸಿದರು.
ಸಿದ್ಧಲಿಂಗಯ್ಯ ಹಿರೇಮಠ, ಭರಮಪ್ಪ ಹುನಗುಂಡಿ, ಬಸವರಾಜ ಹಾಳಕೇರಿ, ಭೀಮಪ್ಪ ಮಡಿವಾಳರ, ಶರಣಪ್ಪ ತಳವಾರ, ಶೇಖಪ್ಪ ಕಿಲ್ಲೇದ, ಬಸನಗೌಡ ಗೌಡರ, ನಿಂಗನಗೌಡ ಗೌಡರ, ಶರಣಪ್ಪ ಹಾಳಕೇರಿ, ಚನ್ನವೀರಯ್ಯ ಹಿರೇಮಠ, ಅಂದಪ್ಪ ಮಾಳಗಿ, ಬಸವರಾಜ ಬಂಡಿವಡ್ಡರ, ಚೆನ್ನವ್ವ ವಡ್ಡರ, ಬಸವಣ್ಣೆವ್ವ ಕೊರವರ, ಪಾರ್ವತೆವ್ವ, ಗೌರಮ್ಮ ಹಿರೇಮಠ, ಶ್ರೀಕಾಂತ ಕೊರವರ, ಮಾರುತಿ ಕೊರವರ, ಈರಣ್ಣ ಹಾದಿಮನಿ, ರೇಣವ್ವ ಭಜಂತ್ರಿ, ಯಶೋದಾ ಭಜಂತ್ರಿ, ದೊಡ್ಡಬಸಪ್ಪ ಅರಳಿ ಇದ್ದರು.