ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೋಣ: ಒಂದು ನಾಮಪತ್ರ ತಿರಸ್ಕೃತ

Lingaraj Badiger
Updated On : 19 Apr 2013, 12:24 pm

ರೋಣ: ಮೇ 5ರಂದು ನಡೆಯುವ ರೋಣ ವಿಧಾನಸಭೆ ಚುನಾವಣೆಗೆ ಏ. 10ರಿಂದ 17ರ ವರೆಗೆ ಒಟ್ಟು 16 ಅಭ್ಯರ್ಥಿಗಳು 27 ನಾಮಪತ್ರ ಸಲ್ಲಿಸಿದ್ದರು. ಗುರುವಾರ ಅವುಗಳ ಪರಿಶೀಲನೆ ಮುಗಿದಿದ್ದು, ಒಂದು ನಾಮಪತ್ರ ತಿರಸ್ಕರಿಸಲಾಗಿದೆ.
ನರೇಗಲ್ ಪಟ್ಟಣದ ಪಕ್ಷೇತರ ಅಭ್ಯರ್ಥಿ ಶರಣಪ್ಪ ಧರ್ಮಾಯತ 10 ಸೂಚಕರ ಬದಲು ನಾಲ್ವರ ಸಹಿ ಅಷ್ಟೇ ಮಾಡಿಸಿದ್ದರಿಂದ ನಾಮಪತ್ರ ತಿರಸ್ಕರಿಸಲಾಯಿತು ಎಂದು ರೋಣ ಮತಕ್ಷೇತ್ರದ ಚುನಾವಣಾ ಅಧಿಕಾರಿ ಆರ್.ಎನ್. ಉಮೇಶ ತಿಳಿಸಿದರು.
ಮಾಜಿ ಶಾಸಕ ಜಿ.ಎಸ್. ಪಾಟೀಲ (ಕಾಂಗ್ರೆಸ್), ಸಚಿವ ಕಳಕಪ್ಪ ಬಂಡಿ (ಬಿಜೆಪಿ), ಹೇಮಗಿರೀಶ ಹಾವಿನಾಳ (ಜೆಡಿಎಸ್), ಅಶೋಕ ಬೇವಿನಕಟ್ಟಿ (ಬಿಎಸ್ಸಾರ್ ಕಾಂಗ್ರೆಸ್), ಶರಣಬಸಪ್ಪ ಮೆಣಸಿನಕಾಯಿ (ಕೆಜೆಪಿ), ಬಸವರಾಜ ದೋಟಿಹಾಳ (ನಾಶನಲ್ ಪಿಪಲ್ಸ್ ಪಾರ್ಟಿ), ಫಕೀರಪ್ಪ ತೆಗ್ಗಿನಮನಿ (ಲೋಕಜನ ಶಕ್ತಿ), ಮೋತಿಲಾಲಸಾ ಮಲಜಿ (ಶುಭ ಕರ್ನಾಟಕ ಪಕ್ಷ), ನಿಂಗಬಸಪ್ಪ ದೊಡ್ಡಮನಿ (ಬಿಎಸ್ಪಿ), ಮಲ್ಲಿಕಾರ್ಜುನ ಸಂಕನಗೌಡ್ರ, ಮಲ್ಲಿಕಾರ್ಜುನ ಬೂದಿಹಾಳ, ರಂಗನಗೌಡ ಪಾಟೀಲ, ವೀರಭದ್ರಪ್ಪ ಬಂಡಿ (ಕಬ್ಬಿಣದ), ಅಂದಾನಪ್ಪ ಅಳವಂಡಿ, ರಾಮಪ್ಪ ಮೇಗಲಮನಿ (ಪಕ್ಷೇತರ) ಅವರ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಸ್ವೀಕರಿಸಲಾಗಿದೆ ಎಂದು ಉಮೇಶ್ ತಿಳಿಸಿದರು. ಕಣದಲ್ಲಿ 15 ಅಭ್ಯರ್ಥಿಗಳು ಉಳಿದಿದ್ದು, ನಾಮಪತ್ರ ವಾಪಸ್ ಪಡೆಯಲು ಏ. 20 ಕೊನೆಯ ದಿನ. ಅಂತಿಮವಾಗಿ ಯಾರು ಸ್ಪರ್ಧೆಯಲ್ಲಿರುತ್ತಾರೆ ಎಂಬುದು ಅಂದೇ ಗೊತ್ತಾಗಲಿದೆ. ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಆರ್.ಎನ್. ಉಮೇಶ, ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ತಹಸೀಲ್ದಾರ ಎಂ.ಬಿ. ಪಾಟೀಲ, ಎನ್.ಎಸ್. ಕೂಡಲ, ಸಿ.ಎನ್. ಜಟ್ಟೆನ್ನವರ ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement