ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಸಕ ಲಮಾಣಿ ಸರ್ವರ ಪ್ರಗತಿಗೆ ಶ್ರಮಿಸಿದ್ದಾರೆ

Lingaraj Badiger
Updated On : 19 Apr 2013, 12:24 pm

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಏ. 18
ರಾಜ್ಯ ಬಿಜೆಪಿ ಸರ್ಕಾರದ 5 ವರ್ಷದ ಅಭಿವೃದ್ಧಿ ಪರ ಯೋಜನೆಗಳನ್ನು ಮತದಾರರು ಪರಿಗಣಿಸಿ, ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ಶಾಸಕ ರಾಮಣ್ಣ ಲಮಾಣಿಯವರು ಪಕ್ಷಪಾತ ಮಾಡದೇ ಸರ್ವ ಜನಾಂಗದವರ ಪ್ರಗತಿಗೆ ಶ್ರಮಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ ಅವರಿಗೆ ಮತ ನೀಡಿ ಆಯ್ಕೆ ಮಾಡುವಂತೆ ಶಾಸಕ ರಾಮಣ್ಣ ಲಮಾಣಿಯವರ ಪತ್ನಿ ಈರಮ್ಮ ಲಮಾಣಿ ಹೇಳಿದರು.
ಅವರು ಗುರುವಾರ ತಾಲೂಕಿನ ವರವಿ ತಾಂಡಾದಲ್ಲಿ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ, ಬಳಿಕ ಮಾತನಾಡಿದರು. ಸರ್ಕಾರದ ಹಲವಾರು ಜನಪರ ಅಭಿವೃದ್ಧಿ ಯೋಜನೆಗಳಿಂದ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ ಮೂಡಿದೆ. ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕುಗಳಾಗಿದ್ದು, ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾಗಲು ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡುವಂತೆ ವಿನಂತಿಸಿದರು. ಗ್ರಾಮೀಣ ಬಡ ಜನತೆಗೆ ಸಾವಿರಾರು ಆಶ್ರಯ ಮನೆ ಮಂಜೂರು ಮಾಡಿಸಲಾಗಿದೆ. ತಾಲೂಕಿನ ಬಹುತೇಕ ತಾಂಡಾಗಳಲ್ಲಿಯೂ ಸಿಸಿ ರಸ್ತೆ, ಚರಂಡಿ, ವಿದ್ಯುತ್, ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ರೈತರ ನೀರಾವರಿ ಬೆಳೆಗಳಿಗೆ ಅನೂಕೂಲವಾಗಲು ಕೆರೆಗಳನ್ನು ಹೂಳೆತ್ತುವುದು. ಚೆಕ್ ಡ್ಯಾಂ ನಿರ್ಮಾಣದಂತಹ ಕಾರ್ಯಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಒದಗಿಸಲಾಗಿದ್ದು, ಮತದಾರರು ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮತ ನೀಡುವಂತೆ ಕೋರಿದರು. ಅನ್ನಪೂರ್ಣ ಕಟ್ಟೇಕಾರ ಮಾತನಾಡಿದರು. ಸಾವಿತ್ರಿ ಪಾಟೀಲ, ನಂದಾ ಹೂಗಾರ, ಗೀತಾ ಬಟಗುರ್ಕಿ, ರೇಷ್ಮಾ ಬಾವಿಕಟ್ಟಿ, ಡಾ. ರತ್ನಕ್ಕ ಹಿರೇಮಠ, ಸುಮಾ ಲಮಾಣಿ, ಗಂಗವ್ವ ಲಮಾಣಿ, ರೇಣವ್ವ ಲಮಾಣಿ, ಭೀಮಶಿ ಲಮಾಣಿ, ಮುಂಗಲೆಪ್ಪ ಲಮಾಣಿ, ಸರೋಜ ಕಟ್ಟಿಮನಿ, ಸಣ್ಣವ್ವ ಡಂಬಳ, ಮಲ್ಲಮ್ಮ ಮಾಗಡಿ ಮತ್ತಿತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement