ಶೋಭಾ ಲಮಾಣಿಯಿಂದ ಮತಯಾಚನೆ
ಮುಂಡರಗಿ: ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಶೋಭಾ ಲಮಾಣಿ ಸೋಮವಾರ ಪಟ್ಟಣದಲ್ಲಿ ಮತಯಾಚನೆ ಮಾಡಿದರು. ಬಜಾರ, ಅಂಬಾಭವಾನಿ ನಗರ, ವಿದ್ಯಾನಗರ, ಕೋಟೆಭಾಗ, ಬಸ್ನಿಲ್ದಾಣದ ಭಾಗಗಳಿಗೆ ತೆರಳಿ ಇದೊಂದು ಬಾರಿ ತಮಗೆ ಮತ ನೀಡಿ ಆಶೀರ್ವದಿಸುವಂತೆ ಜನರಲ್ಲಿ ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾಡಿದ ಜನಪರ ಯೋಜನೆಗಳು ಹಾಗೂ ಬಡವರ, ಹಿಂದುಳಿದವರ, ರೈತರ ಪರವಾದ ಬಜೆಟ್ ಮಂಡಿಸಿದ್ದು, ತಮಗೆ ಹೆಚ್ಚು ಮತಗಳು ದೊರೆಯಲು ಅನುಕೂಲವಾಗಲಿದೆ. ಜಿಲ್ಲಾ ಕೆಜೆಪಿ ಮುಖಂಡ ಎಚ್. ವಿರುಪಾಕ್ಷಗೌಡ, ತಾಲೂಕು ಅಧ್ಯಕ್ಷ ಕಾಂತರಾಜ ಹಿರೇಮಠ, ಉಪಾಧ್ಯಕ್ಷ ಬಸವರಾಜ ನವಲಗುಂದ, ಬಸವರಾಜ ದೇಸಾಯಿ, ಸುರೇಶ ಮೇಗಲಮನಿ, ಪುಷ್ಪಲತಾ ಮಾಡಲಗೇರಿ, ತಾಲೂಕು ಕಾರ್ಯದರ್ಶಿ ಎಸ್.ಜೆ. ಪುರದ, ರೈತ ಮೋರ್ಚಾ ಅಧ್ಯಕ್ಷ ಅಂದಾನಗೌಡ ಕುಲಕರ್ಣಿ, ಮಹೇಶ ಹೊಗೆಸೊಪ್ಪಿನ, ಸಲೀಂ ಜವಳಿ, ಅಮರ ಜೈನ್, ಶಾಂತಾ ಪೂಜಾರ, ಶಿವಾನಂದ ಪೂಜಾರ ಅನೇಕ ಕಾರ್ಯಕರ್ತರು ಇದ್ದರು.