ಕಾಂಗ್ರೆಸ್ ಬಡವರ ಪಕ್ಷ: ಯಾವಗಲ್
ನರಗುಂದ: ಕಾಂಗ್ರೆಸ್ ಪಕ್ಷಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಅಂದಿನಿಂದ ಇಂದಿನ ವರೆಗೂ ಬಡವರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಡವರ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದರು.
ಈಚೆಗೆ ಅವರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಮತಯಾಚನೆ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ 5 ವರ್ಷ ಆಡಳಿತದ ಅವಧಿಯಲ್ಲಿ 3 ಜನ ಮುಖ್ಯಮಂತ್ರಿಗಳನ್ನು ನೀಡಿದೆ. ಬಿಜೆಪಿಯ ಹಲವು ಶಾಸಕ, ಸಚಿವರು ಭ್ರಷ್ಟಾಚಾರ ಮಾಡುವ ಮೂಲಕ ದೇಶದ ಬೊಕ್ಕಸಕ್ಕೆ ಸಾಕಷ್ಟು ನಷ್ಟವನ್ನುಂಟು ಮಾಡಿದ್ದಾರೆ. ಆದ್ದರಿಂದ ಮತದಾರರು ಬಡವರ, ಅಲ್ಪಸಂಖ್ಯಾತರ ಪಕ್ಷವೆಂದು ಕರೆಯುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಗುರ್ತಿಗೆ ತಮ್ಮ ಮತ ನೀಡಿಬೇಕೆಂದು ಕೋರಿದರು. ಸಭೆಯಲ್ಲಿ ಹುಣಸಿಕಟ್ಟಿ ಗ್ರಾಮದ ಬಿಜೆಪಿಯ ಪ್ರಕಾಶಗೌಡ ಹುಡೇದಮನಿ, ಬಸನಗೌಡ ಹುಡೇದಮನಿ, ಬಸನಗೌಡ ಫಕೀರಗೌಡ್ರ, ಡಿ.ಎಸ್. ಲದ್ದಿ, ಚಂದ್ರು ಹಡಪದ, ಸಂಗನಗೌಡ ಬನಪ್ಪಗೌಡ್ರ, ಮುತ್ತಪ್ಪ ಮುಳ್ಳೂರ, ಆನಂದ ಮಲಸಮುದ್ರ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡರು. ಗಿರೀಶ ಪಾಟೀಲ, ರಾಜು ಕಲಾಲ, ಮಾರುತಿ ಮೇಟಿ, ಎಲ್.ಎಚ್. ಕರಮಡಿ, ಶಿವನಗೌಡ ಹೆಬ್ಬಳ್ಳಿ, ರಾಚಪ್ಪ ಅಳಗವಾಡಿ, ಎಂ.ಎಸ್. ಮುಳ್ಳೂರ, ಶೆಟ್ಟಪ್ಪ ಮುಳ್ಳೂರ, ಶಿವಾ ಹೆಬ್ಬಳ್ಳಿ, ಐ.ವೈ. ಮನಿಕಟ್ಟಿ, ಚಂದ್ರು ಮೊರಬದ, ಡಾ. ಸಂತೋಷ ಯಾವಗಲ್, ಜಗದೀಶ ರಾಯನಗೌಡ್ರ, ಮಹಾಂತೇಶ ತಳವಾರ ಉಪಸ್ಥಿತರಿದ್ದರು.