ಗದಗ: ನೀರು ಪೂರೈಕೆಯಲ್ಲಿ ವ್ಯತ್ಯಯ
ಗದಗ: ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದ್ದ ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾಗಿದೆ ಎಂದು ಜಲಮಂಡಳಿ ತಿಳಿಸಿದ್ದು, ಕಾರಣ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕೊಳವೆಬಾವಿಗಳಿದ್ದ ಕಡೆಗಳಲ್ಲಿ ಅವುಗಳ ಮೂಲಕ ನೀರು ಪೂರೈಕೆ ಮಾಡಲಿದ್ದು, ಸಾರ್ವಜನಿಕರು ಸಹಕರಿಸುವಂತೆ ನಗರಸಭೆಯ ಪ್ರಕಟಣೆ ತಿಳಿಸಿದೆ.
ಮುಶಿಗೇರಿ ಗ್ರಾಮಸ್ಥರು ಬಿಜೆಪಿ ಸೇರ್ಪಡೆ
ಮುಂಡರಗಿ: ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಕಳಕಪ್ಪ ಬಂಡಿ ಸಮ್ಮುಖದಲ್ಲಿ ಈಚೆಗೆ ಮುಂಡರಗಿಯಲ್ಲಿ ಬಿಜೆಪಿ ಸೇರ್ಪಡೆಯಾದರು. ಮುಖಂಡ ಎಸ್.ಆರ್. ದೇಸಾಯಿ, ಎಸ್.ವಿ. ಪಾಟೀಲ, ಗಿಡ್ಡಪ್ಪ ಹಾರೋಗೇರಿ, ಎಂ.ಪಿ. ಕೋರ್ಲಹಳ್ಳಿ, ಬೀರಪ್ಪ ಬಂಡಿ, ಬಿ.ಬಿ. ಅಂಗಡಿ, ಸಿ.ಎಚ್. ಗುಡದೂರ, ಬಿ.ಸಿ. ಪೊಲೀಸಪಾಟೀಲ, ಕಳಕನಗೌಡ ಗೌಡ್ರ, ಮಹೇಶ ಚಿಣಿ, ಮಲ್ಲಪ್ಪ ಚಿಣಿ, ಎಂ.ಜಿ. ಸೋಮನಕಟ್ಟಿ ಉಪಸ್ಥಿತರಿದ್ದರು. ಕನಕಪ್ಪ ಚಿಣಿ, ಅಂದಪ್ಪ ಚಿಣಿ, ಶರಣಪ್ಪ ಗಡಾದ, ಪರಸಪ್ಪ ಚಿಣಿ, ಮಲ್ಲಪ್ಪ ಗುಡೂರ, ಅಶೋಕ ಚಿಣಿ, ಶರಣಪ್ಪ ಚಿಣಿ, ಮಲ್ಲನಗೌಡ ಗೌಡ್ರ, ಮುತ್ತಪ್ಪ ಗುಡೂರ, ರಾಘು ಪತ್ತಾರ, ಶಾಂತಪ್ಪ ತುಗ್ಗಣಿ, ಪ್ರವೀಣ ಚಿಣಿ ಬಿಜೆಪಿ ಸೇರಿದರು. ಕಾರ್ಯಕರ್ತರನ್ನು ಪಕ್ಷಕ್ಕೆ ಸಚಿವ ಕಳಕಪ್ಪ ಬಂಡಿ ಬರಮಾಡಿಕೊಂಡರು.