ಜಿಲ್ಲಾದ್ಯಂತ ರಾಮನವಮಿ ಆಚರಣೆ
ಗದಗ: ರಾಮನವಮಿಯ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀರಾಮನ ಭಕ್ತರು ಶುಕ್ರವಾರ ಶ್ರೀರಾಮ ಮಂದಿರಕ್ಕೆ ತೆರಳಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು. ನರಗುಂದ, ಮುಂಡರಗಿ, ರೋಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಶ್ರೀರಾಮ ದೇವರ ಭಾವ ಚಿತ್ರದ ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತನ ವೇಷಧಾರಿಗಳು ಗಮನಸೆಳೆದರು. ಮಹಿಳೆಯರು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ತೂಗುವ ಮೂಲಕ ಪೂಜೆ ಸಲ್ಲಿಸಿದರು.