ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ತೋಂಟದಾರ್ಯ ಮಠದ ಕಳಸಾರೋಹಣ

Rashmi Kasaragodu
Updated On : 21 Apr 2013, 12:16 pm

ಗದಗ: ಉತ್ತರ ಕರ್ನಾಟಕದಲ್ಲಿ ಐತಿಹಾಸಿಕ ಮತ್ತು ಪುರಾತನವಾದ ಗದುಗಿನ ಜ. ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ತೇರಿನ ಕಳಸಾರೋಹಣ ಮತ್ತು ಬಸವ ಧ್ವಜಾರೋಹಣ ಏ. 21ರ ರಾತ್ರಿ 9ಕ್ಕೆ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಲಿದೆ. ಕಾರಣ ಶ್ರೀಮಠದ ಅಭಿಮಾನಿಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಚೆಟ್ಟಿ ಹಾಗೂ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಷಾಂತರಕಾರರಾಗಿ ಬಿ.ಜಿ. ಗಿರಿತಮ್ಮಣ್ಣವರ
ಗದಗ: ಮೇ 5ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಭಾಷೆಯ ದೈನಿಕಗಳಲ್ಲಿ ನಿತ್ಯ ಪ್ರಕಟಗೊಳ್ಳುವ ಸುದ್ದಿ ಭಾಗಗಳನ್ನು ಭಾಷಾಂತರಿಸಲು ಹಾಗೂ ಚುನಾವಣಾ ವೀಕ್ಷಕರಿಗೆ ಸಾರ್ವಜನಿಕರ ಅಹವಾಲುಗಳ ಮಾಹಿತಿಯನ್ನು ಆಂಗ್ಲಭಾಷೆಯಲ್ಲಿ ಭಾಷಾಂತರಿಸಿ ಮಾಹಿತಿ ನೀಡುವ ಸಲುವಾಗಿ, ಚುನಾವಣಾ ಅವಧಿ ಮುಕ್ತಾಯಗೊಳ್ಳುವವರೆಗೆ ಗದಗ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಪ.ಪೂ. ಕಾಲೇಜಿನ ಆಂಗ್ಲ ಉಪನ್ಯಾಸಕ ಬಿ.ಜಿ. ಗಿರಿತಮ್ಮಣ್ಣವರನ್ನು ನಿಯೋಜಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಾಂಡುರಂಗ ನಾಯಕ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement