ಮಹಿಳೆಯರ ರಕ್ಷಣೆಗೆ ಕೆಜೆಪಿ ಬದ್ಧ: ಅಂಗಡಿ
ಗದಗ: ಮಹಿಳೆಯರ ರಕ್ಷಣೆಗೆ ಕೆಜೆಪಿ ಬದ್ಧವಾಗಿದ್ದು, ಇದಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ರೂಪಿಸಿದ ಭಾಗ್ಯಲಕ್ಷ್ಮಿ ಯೋಜನೆ ಉತ್ತಮ ನಿದರ್ಶನ ಎಂದು ಕೆಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಅಂಗಡಿ ಹೇಳಿದರು.
ನಗರದ 29ನೇ ವಾರ್ಡ್ನಲ್ಲಿ ಕೆಜೆಪಿ ಪರ ಈಚೆಗೆ ನಡೆದ ಪ್ರಚಾರದಲ್ಲಿ ಮಾತನಾಡಿ, ಅತ್ಯಾಚಾರ ವಿರುದ್ಧ ಉಗ್ರವಾದ ಕಾನೂನು ರಚಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ನೇತೃತ್ವದಲ್ಲಿ 29ನೇ ವಾಡರ್ಛ್ನ ಪ್ರೇಮಾ ವಗ್ಗರ, ಯಲ್ಲಮ್ಮ ಸುಣಗಾರ, ಲಕ್ಷ್ಮಿ ಅಬ್ಬಿಗೇರಿ, ಪ್ರಭಾವತಿ ಮೆಣಸಿನಕಾಯಿ, ನಿಂಗಮ್ಮ ಹಳ್ಳಿಕೇರಿ, ಸತ್ಯವ್ವ ಬೂದಿಹಾಳ, ಲಲಿತಾ ತುಪ್ಪದ, ರಾಣಿ ಆದವಾನಿ, ಹೀನಾ ಆದವಾನಿ, ಲಲಿತಾ ಮುಂಡವಾಡ, ಮಂಜುಳಾ ಮಾಳೆ, ಕಮಲವ್ವ ಪಾಪನಾಳ, ಲಕ್ಷ್ಮಿ ನರ್ತಿ, ನೀಲವ್ವ ಪಟೇಲ ಕೆಜೆಪಿ ಸೇರಿದರು.
ಕೆಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸಿದ್ದು ಪಲ್ಲೇದ, ಸದು ಮದರಿಮಠ, ಶ್ರೀನಿವಾಸ ಹುಬ್ಬಳ್ಳಿ, ಅಮರನಾಥ ಬೆಟಗೇರಿ, ಉಡಚಪ್ಪ ಹಳ್ಳಿಕೇರಿ, ಪ್ರಭುದೇವ ಹಿರೇಮಠ, ಕೆ.ಪಿ. ಗುಳಗೌಡ್ರ, ಇರ್ಷಾದ ಮಾನ್ವಿ, ರಜಾಕ ಡಂಕೇದ, ಮಹೇಶ ಕರಿಬಿಷ್ಟಿ, ಸಂಗಣ್ಣ ಬಂಗಾರಶೆಟ್ರ, ವಾಲಿಶೆಟ್ರ, ಮುಜಾವರ, ಖಾಲಿದ ಕೊಪ್ಪಳ ಇದ್ದರು.