ರಾಮಕೃಷ್ಣ ದೊಡ್ಡಮನಿ ಮತಯಾಚನೆ
ಮುಂಡರಗಿ: ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಶುಕ್ರವಾರ ಪಟ್ಟಣದ ವಿವಿಧ ಭಾಗಗಳಿಗೆ ಹಾಗೂ ಎಪಿಎಂಸಿ ಯಾರ್ಡ್‌ಗೆ ತೆರಳಿ ಮತಯಾಚಿಸಿದರು. ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಮತದಾರರು ಬೇಸತ್ತಿದ್ದಾರೆ. ಜನತೆ ಈಗ ಬದಲಾವಣೆ ಬಯಸಿದ್ದಾರೆ. ಬಡವರ ಪರ, ಈ ರಾಷ್ಟ್ರದ ಅಭಿವೃದ್ಧಿಗೆ ಕಾಂಗ್ರೆಸ್ ತನ್ನದೇ ಆದ ಸಾಧನೆ ಮಾಡಿದೆ. ಕೇಂದ್ರದ ಯುಪಿಎ ಸರ್ಕಾರದ ಸಾಧನೆಯನ್ನು ಮೆಚ್ಚಿ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆಂದರು. ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ರಾಮಣ್ಣ ಬಳ್ಳಾರಿ, ಡಿ.ಡಿ. ಮೋರನಾಳ, ಸೊಲಬಣ್ಣ ಜೋಬಾಳಿ, ಶೇಖರ ಜುಟ್ಲಣ್ಣವರ, ರವಿಂದ್ರ ಉಪ್ಪಿನ ಬೆಟಗೇರಿ, ಡಾ. ಬಿ.ಎಸ್. ಮೇಟಿ, ಅಂದಾನಗೌಡ ಪಾಟೀಲ, ದಿಲೀಪ್ ಬನ್ಸಾಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.