ಶಾಸಕ ಲಮಾಣಿಯಿಂದ ಬಿಜೆಪಿ ಕಾರ್ಯಾಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 20
ಈ ಹಿಂದಿನ ಯಾವುದೇ ಸರ್ಕಾರವೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾಡಿದೆ. ಈ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಪ್ರತಿಪಕ್ಷದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನೇಕ ಬಣ್ಣದ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ, ಮತದಾರರು ಮಾತ್ರ ಅವರ ಮಾತಿಗೆ ಮಣ್ಣನೆ ನೀಡದೇ ಬಿಜೆಪಿ ಅಭಿವೃದ್ಧಿ ಕಾರ್ಯ ಹಾಗೂ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಹಾಗೂ ಚಂದ್ರು ಲಮಾಣಿ ಮಾತನಾಡಿದರು.
ವಿವಿಧ ಪಕ್ಷಗಳನ್ನು ತೊರೆದ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸೀತಾರಾಮರಾಜು, ಶಹರ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಕಾಗನೂರುಮಠ, ಎಸ್.ವಿ. ಪಾಟೀಲ, ಆರ್.ಎಂ. ತಪ್ಪಡಿ, ಶಂಕರಗೌಡ ಪಾಟೀಲ, ಸುರೇಶ ಮಾಳೇಕೊಪ್ಪ, ಶಿವು ನವಲಗುಂದ, ಗುಡದಪ್ಪ ದೇಸಾಯಿ, ಚಿನ್ನಪ್ಪ ವಡ್ಡಟ್ಟಿ, ಪರಶುರಾಮ ಸುಣಗಾರ, ಪರುರಾಮ ಕರಡಿಕೊಳ್ಳ, ಹನಮಂತಪ್ಪ ಕುರಿ, ರುದ್ರಪ್ಪ ಲದ್ದಿ, ಸುರೇಶ ಜೈನ್, ಶ್ರೀನಿವಾಸ ಅಬ್ಬಿಗೇರಿ, ಸುರೇಶ ಕ್ಯಾದಿಗಿಹಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಸವರಾಜ ಶಶಿಮಠ ಸ್ವಾಗತಿಸಿ, ವಂದಿಸಿದರು. ನಂತರ ಕೋಟೆ ಭಾಗದಿಂದ ರೋಡ್ ಶೋ ನಡೆಸಲಾಯಿತು.