ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೀರಭದ್ರೇಶ್ವರ ಅದ್ಧೂರಿ ಜಾತ್ರೆ

Lingaraj Badiger
Updated On : 22 Apr 2013, 12:21 pm

ಹಿರೇಕೆರೂರು: ತಾಲೂಕಿನ ನಾಗವಂದ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ ಹಾಗೂ ರಥೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು. 28 ಜತೆ ಹರಕೆ ಗುಗ್ಗಳ ನೆರವೇರಿಸಲಾಯಿತು. ಪುರವಂತರು, ಹರಕೆ  ಗುಗ್ಗಳ ಕೊಡಗಳಿಂದ ದೇಗುಲದ ಆವರಣ ತುಂಬಿತ್ತು.  ಶನಿವಾರ ರಾತ್ರಿಯಿಂದಲೇ ಗುಗ್ಗುಳದ ತಯಾರಿ ನಡೆದಿತ್ತು. ಭಾನುವಾರ ಬೆಳಗ್ಗೆ 6ರಿಂದ 28 ಜೊತೆ ಗುಗ್ಗಳಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವ ವಿಜೃಂಬಣೆಯಿಂದ ಜರುಗಿತು.
ಶ್ರೀ ವೀರಭದ್ರೇಶ್ವರ ಗುಗ್ಗಳ 10 ಜೊತೆ ನಡೆಯುವುದು ಸಂಪ್ರದಾಯ. ಗ್ರಾಮದಲ್ಲಿ ಹರಕೆ ಹೊತ್ತ 28 ಕುಟುಂಬಗಳು ಗುಗ್ಗಳ ಏರ್ಪಡಿಸುವ ಮೂಲಕ ಗಮನ ಸೆಳೆದಿವೆ. ಪ್ರತಿ ಮನೆಯ ಹರಕೆಯ ಗುಗ್ಗಳದ ಎರಡು ಕೊಡಗಳು, ಪುರವಂತರು, ಸಮಾಳ ಬಾರಿಸುವವರು, ಗುಗ್ಗಳ ಹೊತ್ತೊಯ್ಯುವವರು - ಹೀಗೆ 20 ಜನ ಒಂದು ಗುಗ್ಗಳ ಕೊಡದ ರಕ್ಷಣೆ ಮಾಡುವರು. ಮನೆಯಲ್ಲಿ ಉರಿಸಿದ ಗುಗ್ಗಳ ಕೊಡವನ್ನು ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ ಸಾಗಿದರು. ರಾಮಾಯಣ ಮುಂತಾದ ಪುಣ್ಯ ಕಥೆಗಳನ್ನು ಕೇಳುತ್ತಾ ಸಾಗಿದ ಭಕ್ತಸಮೂಹ ಗಮನ ಸೆಳೆಯಿತು. ಹರಕೆ ಗುಗ್ಗಳ ಕೊಡಗಳು, ವಿವಿಧ ವಾದ್ಯ, ಡೊಳ್ಳು, ಭಜನೆ, ಬಾಜಾ, ಭಜಂತ್ರಿಗಳೊಂದಿಗೆ ರಥೋತ್ಸವ ಅದ್ದೂರಿಯಾಗಿ ಸಾಗಿತು. ಗ್ರಾಮದಲ್ಲಿ ಗುಗ್ಗಳ ಹರಕೆ ಮಾಡಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಂತಸ ತಂದಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಯಪ್ಪ ಮಾನೇರ ತಿಳಿಸಿದರು. ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಏ. 21ರಂದು ಹಾಗೂ 22ರಂದು ಸಂಜೆ ಎತ್ತಿನ ಬಂಡಿಗಳ ಮೆರವಣಿಗೆ, 23ರಂದು ಓಕುಳಿ ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement