ಕಾಂಗ್ರೆಸ್, ಬಿಜೆಪಿ ತಿರಸ್ಕರಿಸಿ: ಶ್ರೀರಾಮುಲು
ಶಿರಹಟ್ಟಿ: ಸುಳ್ಳು ಭರವಸೆ ನೀಡುವ ಕಾಂಗ್ರೆಸ್, ಬಿಜೆಪಿಯನ್ನು ಮತದಾರರು ತಿರಸ್ಕರಿಸಲಿದ್ದಾರೆಂದು ಬಿಎಸ್ಆರ್ ಸಂಸ್ಥಾಪಕ ಬಿ. ಶ್ರೀರಾಮುಲು ಹೇಳಿದರು.
ಸೋಮವಾರ ತಾಲೂಕಿನ ಬೆಳ್ಳಟ್ಟಿ ಹಾಗೂ ಶಿರಹಟ್ಟಿ, ಶಿಗ್ಲಿಯಲ್ಲಿ ರೋಡ್ ಶೋ ಮಾಡಿ ಮಾತನಾಡಿದರು. ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತದಿಂದ ರೋಸಿ ಹೋಗಿರುವ ರಾಜ್ಯದ ಜನರು ಈಗ ಬದಲಾವಣೆ ಬಯಸಿದ್ದು, ಈ ಚುನಾವಣೆಯಲ್ಲಿ ಬಿಎಸ್ಆರ್ ಪಕ್ಷವನ್ನು ಬೆಂಬಲಿಸಿರಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಬಿಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಉಚಿತ ರೇಷನ್, ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪಟಾಪ್ ವಿತರಿಸಲಾಗುವುದು. ಹಾಗೂ ರಾಜ್ಯದ ರೈತರ, ಬಡವರ, ಶ್ರಮಿಕರ, ಕೂಲಿ ಕಾರ್ಮಿಕರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲು ಬಿಎಸ್ಆರ್ ಕಂಕಣಬದ್ಧವಾಗಿದೆ ಎಂದರು.
ಜಿಲ್ಲಾಧ್ಯಕ್ಷ ಗಂಗಣ್ಣ ಮಾಹಂತಶೆಟ್ಟರ್ ಮಾತನಾಡಿದರು. ಸಣ್ಣವೀರಪ್ಪ ಹಳ್ಳೆಪ್ಪನವರ, ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಮಹಾಂತೇಶ ಹಳ್ಳೆಪ್ಪನವರ, ಶಿವನಗೌಡ ಕಂಠಿಗೌಡರ, ಮದನಲಾಲ ಭಾಫಣಾ, ಮುದಕಣ್ಣ ಢಾಣಗಲ್, ಶಿವರಾಜಗೌಡ ಪಾಟೀಲ, ಮೋಹನ ನರಗುಂದ, ಮಹಾಂತೇಶ ಕಲ್ಲಪ್ಪನವರ, ಮಾಬುಸಾಬ ಲಕ್ಷ್ಮೇಶ್ವರ, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.