ಕೆಜೆಪಿಯಿಂದ ರಾಜ್ಯದ ಹಿತರಕ್ಷಣೆ
ಗದಗ: ಜಿಲ್ಲೆ ಸೇರಿದಂತೆ ರಾಜ್ಯದ ಹಿತರಕ್ಷಣೆಗೆ ಬದ್ಧವಾಗಿರುವ ಮಾಜಿ ಸಿಎಂ ಬಿಎಸ್‌ವೈ ನೇತೃತ್ವದ ಕರ್ನಾಟಕ ಜನತಾ ಪಕ್ಷ ಬೆಂಬಲಿಸಿ ತಾಲೂಕಿನ ಮತದಾರರು ಹೊಸ ಭಾಷ್ಯ ಬರೆಯಬೇಕೆಂದು ಗದಗ ವಿಧಾನಸಭೆ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಮತದಾರರಲ್ಲಿ ಮನವಿ ಮಾಡಿದರು.
ಗುರುವಾರ ನಗರದ ನಾಲ್ವಾಡದವರ ಓಣಿಯಲ್ಲಿ ನಡೆದ ಕೆಜೆಪಿ ಪ್ರಚಾರ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳನ್ನು ನಂಬಿ ಭ್ರಮನಿರಸನಗೊಂಡಿರುವ ಜನತೆ ಈ ಬಾರಿ ಕೆಜೆಪಿಯನ್ನು ಬೆಂಬಲಿಸಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಮಾಜಿ ಸಿಎಂ ಯಡಿಯೂರಪ್ಪ ಅವರ ಕೆಜೆಪಿ ರಾಷ್ಟ್ರೀಯ ಪಕ್ಷಗಳಲ್ಲಿರುವ ಎಲ್ಲ ನ್ಯೂನತೆಗಳನ್ನು ನಿವಾರಿಸಿಕೊಂಡು ರಾಜ್ಯದ ಸರ್ವಾಂಗೀಣ ಹಿತಕ್ಕೆ ಬದ್ಧವಾಗಿದೆ ಎಂದರು.
ಸದು ಮದರಿಮಠ ಮುಂತಾದವರು ಮಾತನಾಡಿದರು. ಸಿದ್ದು ಪಲ್ಲೇದ, ಶ್ರೀನಿವಾಸ ಹುಬ್ಬಳ್ಳಿ, ರಜಾಕ ಡಂಕೇದ, ಇರ್ಶಾದ ಮಾನ್ವಿ, ಸೈಯದಖಾಲಿದ್ ಕೊಪ್ಪಳ, ಅಮರೇಶ ಅಂಗಡಿ, ಕೆ.ಪಿ. ಗುಳಗೌಡ್ರ ಮುಂತಾದವರು ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. ಇದೇ ವೇಳೆ, ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಸಮ್ಮುಖದಲ್ಲಿ ಹಲವರು ಕೆಜೆಪಿ ಸೇರಿದರು.