ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಜೆಪಿ ಪ್ರಣಾಳಿಕೆ ಹಾಸ್ಯಾಸ್ಪದ: ಜಿ.ಎಸ್. ಪಾಟೀಲ್

Rashmi Kasaragodu
Updated On : 23 Apr 2013, 10:42 am

ಗಜೇಂದ್ರಗಡ: ಹಿಂದಿನ ಚುನಾವಣೆಯಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಸರಿಯಾಗಿ ಜಾರಿಗೆ ತರದ ಬಿಜೆಪಿ ಸರ್ಕಾರ ಈಗ ಮತ್ತೆ ಬೋಗಸ್ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಹಾಸ್ಯಾಸ್ಪದ. ಇದು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಯತ್ನ ಎಂದು ರೋಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಹೇಳಿದರು.
ಈಚೆಗೆ ಅವರು ಸಮೀಪದ ವೀರಾಪುರ ಗ್ರಾಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ವೀರಣ್ಣ ಸೊನ್ನದ, ಚಂಬಣ್ಣ ಚವಡಿ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ದತ್ತುಸಾ ಬಾಕಳೆ, ಗಿರೀಶ ರಂಗ್ರೇಜಿ, ವಿ.ಆರ್. ಗುಡಿಸಾಗರ, ಐ.ಎಸ್. ಪಾಟೀಲ, ವೀರಣ್ಣ ಶೆಟ್ಟರ್, ಸುಭಾನಸಾಬ ಆರಗಿದ್ದಿ, ಪ್ರಭು ಮೇಟಿ, ಮುರ್ತುಜಾ ಡಾಲಾಯತ್, ಭಗವಂತಗೌಡ ಪಾಟೀಲ, ಶ್ರೀಧರ ಗಂಜಿಗೌಡ್ರ, ಮಾರುತಿ ಕಲ್ಲೊಡ್ಡರ್, ಎಫ್.ಎಸ್. ಕರಿದುರಗನವರ, ಷಣ್ಮುಕಪ್ಪ ನಿಡಗುಂದಿ, ಮೂಕಪ್ಪ ಗುಡೂರ, ವಿ.ಬಿ. ಹಪ್ಪಳದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement