ಸಿ.ಸಿ. ಪಾಟೀಲ್ ಪುತ್ರಿ ಮತಯಾಚನೆ
ಗದಗ: ನರಗುಂದ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ್ ಪುತ್ರಿ ದೀಪಾ ಪಾಟೀಲ್ ಭಾನುವಾರ ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಮತ ಯಾಚಿಸಿದರು. ಗದಗ ತಾಲೂಕಿನ ನರಸಾಪುರ, ನಾಗಸಮುದ್ರ, ಬೆನಕೊಪ್ಪ, ನೀರಲಗಿ, ನಾಗರಾಳ ಗ್ರಾಮಗಳಲ್ಲಿ ಬಿಜೆಪಿ ಕಾಯಕರ್ತರೊಂದಿಗೆ ಮನೆ-ಮನೆಗೆ ಭೇಟಿ ನೀಡಿದರು. 50 ವರ್ಷಗಳಲ್ಲಿ ಆಗದೇ ಇರುವ ಅಭಿವೃದ್ಧಿ ಕಾರ್ಯಗಳು ಸಿ.ಸಿ. ಪಾಟೀಲ್ ಅಧಿಕಾರಾವಧಿಯಲ್ಲಿ ಕೈಗೊಂಡಿದ್ದಾರೆ. ಎಲ್ಲ ಸಮುದಾಯದವರ ಜೀವನಾಡಿಯಾಗಿ, ಆತ್ಮೀಯರಾಗಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಬಾರಿ ಸಿ.ಸಿ. ಪಾಟೀಲ್ ಅವರಿಗೆ ಮತ ನೀಡಿ, ನಿಮ್ಮ ಸೇವೆ ಮಾಡುವ ಅವಕಾಶ ನೀಡಬೇಕೆಂದು ಮತದಾರರಲ್ಲಿ ವಿನಂತಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಲೀಲಾ ಕೊಳ್ಳಿ, ಬಸವರಾಜ ಪೂಜಾರ, ತುಕಾರಾಮ ಬೆಡಗೌಡರ, ಕಲ್ಲನಗೌಡ ಪಾಟೀಲ, ನಾಗಪ್ಪ ಹೊಂಬಳ, ಹೇಮಂತಗೌಡ ಬೆನ್ನಾಳ, ಹಂಪಯ್ಯ ಚಕ್ರವತಿಮಠ, ಮಲ್ಲೇಶ ಕಡಕೋಳ, ಜಂಬಣ್ಣ ಕಲಗುಂಡಿ, ಶಾಂತನಗೌಡ ಬೆನ್ನಾಳ, ರಮೇಶ ತಾಳಿಕೋಟಿ, ಮಹಾದೇವಿ ಪಾಟೀಲ, ಬಂದವ್ವ ಸಣ್ಣಗೌಡ್ರ, ಮಲ್ಲವ್ವ ಬೆನ್ನಾಳ, ಕಾಶವ್ವ ಕರಲಿಂಗನವರ ಇದ್ದರು.