ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭಿವೃದ್ಧಿ ಕಾರ್ಯಕ್ಕೆ ಜನ ಮೆಚ್ಚುಗೆ: ಲಮಾಣಿ

Rashmi Kasaragodu
Updated On : 24 Apr 2013, 11:03 am

ಮುಂಡರಗಿ: ಐದು ವರ್ಷದಲ್ಲಿ ಶಿರಹಟ್ಟಿ ಹಾಗೂ ಮುಂಡರಗಿ ಹೋಬಳಿಯಲ್ಲಿ ಕೋಟ್ಯಂತರ ಹಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮತದಾರರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದು ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಹೇಳಿದರು.
ಈಚೆಗೆ ಅವರು ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ನನ್ನ ಮತದಾರ ಬಾಂಧವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿಯೂ ನನಗೆ ಆಶೀರ್ವದಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದರು. ತಾಪಂ ಮಾಜಿ ಅಧ್ಯಕ್ಷ ರಂಗಪ್ಪ ಕ್ಯಾದಿಗಿಹಳ್ಳಿ ಮಾತನಾಡಿ, ಯಾವುದೇ ಜಾತಿ, ಭೇದವಿಲ್ಲದೆ ಜನಮೆಚ್ಚುವಂತಹ ಅಧಿಕಾರ ನಡೆಸಿದ ಲಮಾಣಿಯವರ ಜಯ ಖಚಿತವಾಗಿದೆ ಎಂದರು.
ಶಿರೋಳ ಗ್ರಾಮದ ಸಿದ್ದಪ್ಪಗೌಡ ಗೌಡ್ರ, ಯಲ್ಲಪ್ಪ ಗುಡಗೇರಿ, ಕೆಂಚನಗೌಡ ಗೌಡ್ರ, ದೇವಪ್ಪ ಕಲಕೇರಿ, ಮಹಾಬಳೇಶ್ವರಪ್ಪ ಅಳವಂಡಿ, ಹನುಮಂತಗೌಡ ಗೌಡ್ರ, ಯಲ್ಲನಗೌಡ ಗೌಡ್ರ, ಗೋಪುತ್ರಪ್ಪ ಅಳವಂಡಿ, ನಾಗಪ್ಪ ಕವಲೂರ, ಸಿದ್ದನಗೌಡ ಗೌಡ್ರ, ಬಸನಗೌಡ ಗೌಡ್ರ, ಹನಮಪ್ಪ ಬೆಣಮನಾಳ, ಹಾಲನಗೌಡ ಗೌಡ್ರ, ನೀಲನಗೌಡ ಪಾಟೀಲ ಮುಂತಾದವರು ಬಿಜೆಪಿ ಸೇರ್ಪಡೆಗೊಂಡರು. ಶಿರೋಳ ಹಾಗೂ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿ ರಾಮಣ್ಣ ಲಮಾಣಿ ದಂಪತಿ ಸಮೇತ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಸೀತಾರಾಮರಾಜು, ಪ್ರಕಾಶ ಪಾಟೀಲ, ಆರ್.ಎಂ. ತಪ್ಪಡಿ, ಸುರೇಶ ಕ್ಯಾದಿಗಿಹಳ್ಳಿ, ಶಹರ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ, ಮಲ್ಲಪ್ಪ ಸಂಘಟಿ, ಪುರಸಭೆ ಸದಸ್ಯ ಸುರೇಶ ಮಾಳೆಕೊಪ್ಪ, ಶಂಕರಗೌಡ ಪಾಟೀಲ, ಮಂಜುನಾಥ ಕಾಗನೂರಮಠ, ಅಂದಪ್ಪ ಕುರುಡಗಿ, ಮಹೇಶ ನಾಗರಳ್ಳಿ ಸೇರಿದಂತೆ ಮತ್ತಿತರು ರಾಮಣ್ಣ ಲಮಾಣಿ ಪರ ಮತಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement