ಕಪ್ಪತ್ತಗುಡ್ಡಕ್ಕೆ ಬೆಂಕಿ
ಮುಂಡರಗಿ: ತಾಲೂಕಿನ ಹಿರೇವಡ್ಡಟ್ಟಿ ಹತ್ತಿರದ ಹನುಮಂತ ದೇವರ ಕಣವಿ ಹತ್ತಿರವಿರುವ ಕಪ್ಪತ್ತಗುಡ್ಡಕ್ಕೆ ಸೋಮವಾರ ತಡರಾತ್ರಿ ಬೆಂಕಿ ಬಿದ್ದು, ಹಲವಾರು ಔಷಧೀಯ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ. ಎರಡು ವರ್ಷಗಳಿಂದ ತೀವ್ರವಾದ ಮಳೆ ಕೊರತೆಯನ್ನು ಜಿಲ್ಲೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಕಪ್ಪತ್ತಗುಡ್ಡ ಭಾಗದಲ್ಲಿ ಔಷಧಿ ಸಸ್ಯಗಳು ಸಾಕಷ್ಟು ಒಣಗಿ ಹೋಗಿದ್ದು, ಆವೆಲ್ಲ ಈಗ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.