ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ನಿಂದ ಅಭಿವೃದ್ಧಿ ಅಸಾಧ್ಯ: ಬಂಡಿ

Rashmi Kasaragodu
Updated On : 24 Apr 2013, 11:02 am

ಮುಂಡರಗಿ: ಕಳೆದ 40-50 ವರ್ಷಗಳಿಂದ ಅಧಿಕಾರ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ನಿಂದ ಅಭಿವೃದ್ಧಿ ಅಸಾಧ್ಯ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಹೇಳಿದರು.
ಅವರು ಭಾನುವಾರ ರೋಣ ಮತಕ್ಷೇತ್ರದಲ್ಲಿ ಬರುವ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಈ ಭಾಗದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆ ಕಾಮಗಾರಿ ಮುಂದಿನ ಒಂದು ವರ್ಷದಲ್ಲಿ ಈ ಭಾಗದ ಲಕ್ಷಾಂತರ ಏಕರೆ ಜಮೀನುಗಳಿಗೆ ನೀರು ಒದಗಿಸಿ, ಇದೊಂದು ಹಸಿರು ನಾಡಾಗುವಲ್ಲಿ ಯಶಸ್ವಿಯಾಗಲಿದೆ ಎಂದರು.
ಈ ಯೋಜನೆಯನ್ನು ಪೂರ್ಣಗೊಳಿಸಲು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಈ ಯೋಜನೆ ಪ್ರಾರಂಭವಾಗಿ 23 ವರ್ಷಗಳು ಗತಿಸಿದರೂ ಯಾವ ಪಕ್ಷದ ಸರ್ಕಾರಗಳೂ ಇದನ್ನು ಪೂರ್ಣಗೊಳಿಸಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಪ್ರಮಾಣದ ಅನುದಾನವನ್ನು ಬಿಡುಗಡೆಮಾಡಿ, ಈ ಯೋಜನೆಯನ್ನು ಪೂರ್ಣಗೊಳಿಸುವ ಹಂತಕ್ಕೆ ತಂದಿದೆ. ಈಗಾಗಲೇ ಎಡದಂಡೆ ಕಾಲುವೆ ಭಾಗದಲ್ಲಿ 5000 ಎಕರೆ ಪ್ರದೇಶದಲ್ಲಿ ರೈತರಿಗೆ ನೀರು ಒದಗಿಸಲಾಗಿದೆ. ಮೇ 5 ರಂದು ಜರುಗುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡುವ ಮೂಲಕ ಮತ್ತೆ ಆಶೀರ್ವಾದ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಶಿವಪ್ಪ ಅಂಕದ, ಬೀರಪ್ಪ ಬಂಡಿ, ವಿ.ಎಸ್. ಯರಾಶಿ ಮಾತನಾಡಿದರು. ನಿಂಗಬಸಪ್ಪ ಪ್ಯಾಟಿ, ಗಿಡ್ಡಪ್ಪ ಹಾರೋಗೇರಿ, ತಾಪಂ ಅಧ್ಯಕ್ಷ ನಾಗಮ್ಮ ಬಳ್ಳಾರಿ, ಲಕ್ಷ್ಮವ್ವ ಕಟಿಗಾರ, ಮಲ್ಲಿಕಾರ್ಜುನ ರಮಾಣಿ, ಅಂದಪ್ಪ ಸಜ್ಜನರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಬಿ.ಎ. ಹಳ್ಳಿಕೇರಿ ಮುಂತಾದವರು ಉಪಸ್ಥಿತರಿದ್ದರು. ತಾಲೂಕಿನ ಹಾರೋಗೇರಿ, ಮುರಡಿ, ಕೆಲೂರ ಮುಂತಾದ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು. ಉಮೇಶ ಅಂಕದ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement