ಬಿಜೆಪಿಯಿಂದ ಜನ ವಿರೋಧಿ ಕಾರ್ಯ
ಗಜೇಂದ್ರಗಡ: ರಾಜ್ಯ ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸದೆ ಬರಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಂತಹ ಜನ ವಿರೋಧಿ ಚಟುವಟಿಕೆಯಲ್ಲಿ ಕಾಲಹರಣ ಮಾಡಿದೆ. ಹೀಗಾಗಿ ಬಿಜೆಪಿಗೆ ಮತದಾರರು ಈ ಬಾರಿ ಸೋಲಿನ ರುಚಿ ತೋರಿಸಲು ಸನ್ನದ್ಧರಾಗಿದ್ದಾರೆ ಎಂದು ಮಾಜಿ ಸಂಸದ ಆರ್.ಎಸ್. ಪಾಟೀಲ ಹೇಳಿದರು.
ಈಚೆಗೆ ಅವರು ಸ್ಥಳೀಯ ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯದಲ್ಲಿ ಎಸ್ಎಸ್ಕೆ ಸಮುದಾಯದ ಹಿರಿಯ ಮುಖಂಡರಾದ ವಿಶ್ವನಾಥಸಾ ಮೇಘರಾಜ, ಗ್ಯಾನುಸಾ ರಾಯಬಾಗಿ, ರಾಮಚಂದ್ರಸಾ ಮೇಘರಾಜ, ಸಿದ್ದುಸಾ ರಾಯಬಾಗಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಕಾಂಗ್ರೆಸ್ ಮುಖಂಡ ಮೋಹನಸಾ ರಾಯಬಾಗಿ, ಗಿರೀಶ ರಂಗ್ರೇಜಿ, ಸುಭಾನಸಾಬ ಆರಗಿದ್ದಿ, ವೀರಣ್ಣ ಸೊನ್ನದ ಮಾತನಾಡಿದರು. ಈ ಸಂದರ್ಭದಲ್ಲಿ ಚಂಬಣ್ಣ ಚವಡಿ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಪ್ರೀತಮ್ ಭಾಂಡಗೆ, ಶರಣಪ್ಪ ಕೊಟಗಿ, ಯಂಕಣ್ಣ ಸೊನ್ನದ, ಪಿ.ಟಿ. ದಾನಿ, ನಾಗುಸಾ ಬಸವಾ, ವೆಂಕಟೇಶ ಮುದಗಲ್, ದತ್ತುಸಾ ಬಾಕಳೆ, ಶ್ರೀಧರ ಗಂಜಿಗೌಡ್ರ, ಚಂದ್ರು ರಾಯಬಾಗಿ, ಮುರ್ತುಜಾ ಡಾಲಾಯತ್, ಶ್ರೀಧರ ಚುಂಚಾ ಉಪಸ್ಥಿತರಿದ್ದರು.