ಮಹಾವೀರ ಜನ್ಮದಿನ ಆಚರಣೆ
ಮುಂಡರಗಿ: ಭಗವಾನ್ ಮಹಾವೀರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಜೈನ ಸಮಾಜ ಬಾಂಧವರು ಮಹಾವೀರರ ಭಾವಚಿತ್ರದ ಮೆರವಣಿಗೆ ಮಾಡಿದರು.
ಜೈನ ಮಂದಿರದಿಂದ ಮೆರವಣಿಗೆ ಪ್ರಾರಂಭಿಸಿ ಪಟ್ಟಣದ ಹೊಸ ಬಸ್ ನಿಲ್ದಾಣ, ಬೃಂದಾವನ ವೃತ್ತ, ಬಜಾರ, ಕೊಪ್ಪಳ ವೃತ್ತ ಹಾಗೂ ಕೋಟೆ ಭಾಗದಲ್ಲಿ ನಡೆಸಲಾಯಿತು. ಬಾಬುಲಾಲ್ ಜೈನ್, ಪಾರಸ್ಮಲ್ ಮೆಹತಾ, ಬಾಬಣ್ಣ ಜೈನರ್, ಗೌತಮ್ಚಂದ್ ಚೋಪ್ರಾ, ರಾಮ್ಲಾಲ್ ಜೈನ, ಸುರೇಶ ಜೈನ, ದಿಲೀಪ್ ಬನ್ಸಾಲಿ ಹಾಗೂ ಜೈನ ಸಮಾಜದ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.