ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ: ಶ್ರೀರಾಮುಲು ರೋಡ್ ಶೋ

Rashmi Kasaragodu
Updated On : 24 Apr 2013, 11:03 am

ಮುಂಡರಗಿ: ಶಿರಹಟ್ಟಿ ಮೀಸಲು ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ  ಹಳ್ಳೆಪ್ಪನವರ ಪರ ಬಿಎಸ್ಆರ್ ಸಂಸ್ಥಾಪಕ ಬಿ. ಶ್ರೀರಾಮುಲು ಪಟ್ಟಣದಲ್ಲಿ ಸೋಮವಾರ ಸಂಜೆ ರೋಡ್ ಶೋ ಮಾಡುವ ಮೂಲಕ ಮತಯಾಚಿಸಿದರು.
ಶಿರಹಟ್ಟಿ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಾಹನದಲ್ಲಿ ಮೆರವಣಿಗೆ ಮೂಲಕ ಹೊಸ ಬಸ್ನಿಲ್ದಾಣ, ಪ್ರಮುಖ ರಸ್ತೆ ಮೂಲಕ ಬಜಾರ, ಗಾಂಧಿವೃತ್ತ, ಕೋಟೆ ಭಾಗದಲ್ಲಿ ರೋಡ್ ಶೋ ನಡೆಸಿದರು.
ಜಯಶ್ರೀ ಹಳ್ಳೆಪ್ಪನವರ, ಸಣ್ಣೀರಪ್ಪ ಹಳ್ಳೆಪ್ಪನವರ, ಗಂಗಣ್ಣ ಮಹಾಂತಶೆಟ್ಟರ, ಮಹಾಂತೇಶ ಹಳ್ಳೆಪ್ಪನವರ, ಕುಮಾರಸ್ವಾಮಿ ಹಿರೇಮಠ, ರಾಮಣ್ಣ ಕೋಳಿ, ರವಿಚಂದ್ರ ಸುಣಗಾರ, ಮಲ್ಲಿಕಾರ್ಜುನ ದೊಡ್ಡಮನಿ, ಮೋದಿನಸಾಬ್ ಡಂಬಳ, ಮಾರುತಿ ಜಾಲಿಹಾಳ, ಬಿ.ಎಂ. ತಿಮ್ಮಾಪುರ ಸೇರಿದಂತೆ ಅನೇಕ ಗಣ್ಯರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement