ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಷ್ಟ್ರೀಯ ಪಕ್ಷಗಳಿಗೆ ಸೋಲು: ಹಾವಿನಾಳ

Rashmi Kasaragodu
Updated On : 24 Apr 2013, 11:03 am

ಗಜೇಂದ್ರಗಡ: ಕಾಂಗ್ರೆಸ್ ನೇತೃತ್ವದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರ, ದುರಾಡಳಿತದಿಂದ ಜನತೆ ಬೇಸತ್ತ ಪರಿಣಾಮ ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಗೆಲ್ಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸೋಲಿನ ರುಚಿ ತೋರಿಸಲಿದ್ದಾರೆಂದು ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಹೇಳಿದರು. ಜೆಡಿಎಸ್ ಪಕ್ಷದ ಸ್ಥಳೀಯ ಕಾರ್ಯಾಲಯದಲ್ಲಿ ಕಣಗಿನಹಾಳ ಗ್ರಾಮದ ಮಾಜಿ ಕುಸ್ತಿ ಪೈಲ್ವಾನ ಸಂಘದ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಹಾವಿನಾಳ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೇವಲ 20 ತಿಂಗಳು ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆಯಂತಹ ವಿನೂತನ ಯೋಜನೆ ಜಾರಿಗೊಳಿಸುವ ಮೂಲಕ ದೇಶದಲ್ಲಿಯೇ ಕರ್ನಾಟಕ ಮಾದರಿ ರಾಜ್ಯವನ್ನಾಗಿಸಲು ಶ್ರಮಿಸಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ಮುಖಂಡ ಡಾ೤ ಮಂಜುನಾಥ ವಿಶ್ವಬ್ರಾಹ್ಮಣ ಮಾತನಾಡಿದರು. ಕಣಗಿನಹಾಳ ಗ್ರಾಮದ ದೇವಪ್ಪ ಯಲಿಗಾರ, ನಿಂಗಪ್ಪ ಹಾದಿ, ಶರಣಪ್ಪ ಕುರಡಗಿ, ಹೇಮಣ್ಣ ಹಾದಿ, ಹನಮಪ್ಪ ರಾಟಿ, ಇಮಾಮ ನದಾಫ್, ಹನಮಂತಪ್ಪ ಹಾತಲಗೇರಿ, ಭೀಮಪ್ಪ ನರೇಗಲ್, ಈರಣ್ಣ ಬಾದರದಿನ್ನಿ, ಸತ್ಯಪ್ಪ ಹಂಪಣ್ಣನವರ ಜೆಡಿಎಸ್ ಸೇರಿದರು. ಮುಂಡರಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಉಮೇಶ ಹಿರೇಗೌಡರ, ಚನ್ನಬಸಪ್ಪ ಇಟಗಿ, ಶಶಿಧರ ಪಾಟೀಲ, ಶಿವರಾಜ ಕಳಕನಗೌಡರ, ಸುರೇಶ ಹಾಲಾಪುರ, ಕೊಟ್ರೇಶ ಮುತ್ತೂರ, ಶಂಕ್ರಪ್ಪ ಮೂಗನೂರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement